ಮೋಡ ಬಿತ್ತನೆ ಕುರಿತು “ಶಕ್ತಿ” ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಪೊನ್ನಣ್ಣ ಅವರು ಈ ಕುರಿತು ನೀಡಿದ ಸ್ಪಷ್ಟನೆ ಹೀಗಿದೆ:” ಮೋಡ ಬಿತ್ತನೆ ಕುರಿತು ಕೊಡಗಿನ ಕೆಲವರು ಆತಂಕ ವ್ಯಕ್ತಪಡಿಸಿದ್ದು ನನ್ನ ಗಮನಕ್ಕೆ ಬಂದಿತು. ಈ ಸಂಬAಧ ಸಚಿವ ಚೆಲುವರಾಯಸ್ವಾಮಿ ಅವರನ್ನು ಇಂದು ಭೇಟಿಯಾಗಿ ಮಾತನಾಡಿದೆ. ರಾಜ್ಯದ ಎಲ್ಲಿಯೂ ಮೋಡ ಬಿತ್ತನೆ ಇನ್ನೂ ಪ್ರಾರಂಭಿಸಿಲ್ಲ. ಮುಂದೆ ಬಿತ್ತನೆ ಮಾಡುವುದಾದರೂ ಕೊಡಗಿನಲ್ಲಿ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂಬದಾಗಿ ಪೊನ್ನಣ್ಣ ಖಚಿತಪಡಿಸಿದ್ದಾರೆ.