ಬೆAಗಳೂರು, ಆ. ೨೪ ರಾಜ್ಯ ಸರಕಾರ ಮೋಡ ಬಿತ್ತನೆ ಮಾಡಲು ತೀರ್ಮಾನಿಸಿದ್ದರೂ ಕೂಡ ಇದುವರೆಗೂ ಎಲ್ಲಿಯೂ ಅದನ್ನು ನಿರ್ವಹಿಸಿಲ್ಲ. ನಾಲ್ಕೆöÊದು ದಿನಗಳ ನಂತರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಖಾತೆ ಸಚಿವ ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ‘ಶಕ್ತಿ” ಯೊಂದಿಗೆ ಮಾಹಿತಿ ನೀಡಿದ ಸಚಿವರು ಇದರ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗೆ ನೀಡಿದ್ದು ರಾಜ್ಯ ಸರಕಾರದ ಸಂಬAಧಿತ ಇಲಾಖೆಯೊಂದಿಗೆ ಇವರುಗಳು ತಾ. ೨೫ರಂದು ಸಭೆ ನಡೆಸಲಿದ್ದಾರೆ ಎಂದು ಹೇಳಿದರು. ರಾಜ್ಯದ ಯಾವ ಯಾವ ವಿಭಾಗಗಳಲ್ಲಿ ಮಳೆಯ ಅವಶ್ಯಕತೆ ಇದೆ, ಎಲ್ಲೆಲ್ಲಿ ಮೋಡ ಬಿತ್ತನೆ ಮಾಡಬಹುದು ಎಂದು ನಿರ್ಧರಿಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕೊಡಗು ಜಿಲ್ಲೆಯೂ ಸೇರಿದಂತೆ ಯಾವುದೇ ಪ್ರದೇಶದಲ್ಲಿ ಇದುವರೆಗೂ ಮೋಡ ಬಿತ್ತನೆ ಕಾರ್ಯ ನಡೆಸಿಲ್ಲ, ಇದಕ್ಕೆ ನಾಲ್ಕೆöÊದು ದಿನಗಳ ನಂತರ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಚಾಲನೆ ನೀಡಲಾಗುವುದು ಎಂದು ಸಚಿವ ಚೆಲುವರಾಯಸ್ವಾಮಿ ವಿವರಣೆ ನೀಡಿದರು. ಕೊಡಗಿನ ಬರಪೊಳೆ, ಕೊಂಗಣ ಹೊಳೆ, ಮಾಕುಟ್ಟ ಮುಂತಾದ ಜಲಮೂಲಗಳ ನೀರು ಕೇರಳಕ್ಕೆ ಹರಿಯುತ್ತಿರುವುದರಿಂದ ಈ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವರ ಗಮನ ಸೆಳೆಯಲಾಯಿತು. ಅಲ್ಲದೆ ಪಯಸ್ವಿನಿ ನದಿ ಕೂಡ ಕೇರಳದ ಕಾಸರಗೋಡು ಕಡೆಗೆ ಹರಿಯುವುದರಿಂದ ಇಲ್ಲಿಯೂ ಮೋಡ ಬಿತ್ತನೆಯ ಅವಶ್ಯಕತೆ ಬಗ್ಗೆ ಸರ್ಕಾರ ಮರು ಚಿಂತನೆ ಮಾಡಬೇಕು ಎಂದು ಸಚಿವರ ಗಮನಕ್ಕೆ ತರಲಾಯಿತು. ಕೊಡಗಿನಲ್ಲಿ ಸ್ವಾಭಾವಿಕವಾಗಿಯೇ ಎಲ್ಲ ಪ್ರದೇಶಗಳಲ್ಲೂ ಸಾಕಷ್ಟು ಮಳೆಯಾಗುತ್ತಿದ್ದು ಮತ್ತೆ ಮೋಡ ಬಿತ್ತನೆ ಮಾಡಿ ಅತಿವೃಷ್ಟಿ ಸೃಷ್ಟಿಸುವ ಹಾಗೂ ಅದರಿಂದಾಗಿ ಕೊಡಗಿನ ಕಾಫಿ ಬೆಳೆಗಾರರು ಹಾಗೂ ರೈತರು ತೀರಾ ಸಮಸ್ಯೆ ಅನುಭವಿಸಬೇಕಾದ ಬಗ್ಗೆ ಕೊಡಗಿನ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಅಂಶವನ್ನು ಕೂಡ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು - ಟಿ. ಎಲ್. ಶ್ರೀನಿವಾಸ್