ನಾಪೋಕ್ಲು, ಆ. ೨೩: ನಾಪೋಕ್ಲು- ವೀರಾಜಪೇಟೆ ಮುಖ್ಯರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದು ರಸ್ತೆ ಸಂಪರ್ಕ ಸ್ಥಗಿತಗೊಂಡ ಘಟನೆ ನಿನ್ನೆ ನಡೆಯಿತು.

ಮರಂದೋಡ ಸಮೀಪದ ಇಡಿಂಜಿಮೊಟ್ಟೆ ಎಂಬಲ್ಲಿ ನಡಿಕೇರಿಯಂಡ ಮನೆಯ ಪಕ್ಕದ ರಸ್ತೆಗೆ ಬಾರಿ ಗಾತ್ರದ ಮರ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದರಿಂದಾಗಿ ಪರ್ಯಾಯ ರಸ್ತೆಯಾದ ಕೋಕೇರಿ ರಸ್ತೆಯನ್ನು ವಾಹನಗಳು ಬಳಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಗ್ರಾಮಸ್ಥರು ಶ್ರಮ ವಹಿಸಿ ಮರವನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚೋಯಮಾಡಂಡ ಹರೀಶ್ ಪೊನ್ನಪ್ಪ, ಗಿರೀಶ್ ಪೂವಯ್ಯ, ಮನೋಜ್ , ಮೇರಿಯಂಡ ಅಪ್ಪಣ್ಣ , ನಾಚಪ್ಪ , ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.