ವೀರಾಜಪೇಟೆ, ಆ. ೨೩: ಹಬ್ಬಗಳನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸೌಹಾರ್ಧತೆಯಿಂದ ಆಚರಿಸುವಂತಾಗಬೇಕು ಎಂದು ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ಹೇಳಿದರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ವೀರಾಜಪೇಟೆ ಪೊಲೀಸ್ ಉಪವಿಭಾಗ ಮಟ್ಟದ ಮಸೀದಿಗಳ ಮುಖಂಡರುಗಳೊAದಿಗೆ ನಡೆಸಿದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಬ್ಬಗಳಲ್ಲಿ ಬ್ಯಾನರ್ ಬಂಟಿAಗ್ಸ್ ಫ್ಲೆಕ್ಸ್ ಧ್ವಜಗಳನ್ನು ಅಳವಡಿಸುವಾಗ ಸಾರ್ವಜನಿಕರಿಗೆ, ವಾಹನ ನಿಲುಗಡೆ ಹಾಗೂ ಸಂಚಾರಕ್ಕೆ ಅಡಚಣೆ ಯಾಗದಂತೆ ಅಳವಡಿಸಬೇಕು. ನಗರ ಪಟ್ಟಣಗಳಲ್ಲಿ ಅಳವಡಿಸುವ ಬ್ಯಾನರ್ ಧ್ವಜಗಳಿಗೆ ಆಯೋಜಕರೇ ಜವಾಬ್ದಾರರಾಗಿರುತ್ತಾರೆ. ವಿದ್ಯುತ್ ಕಂಬಗಳಿಗೆ ಬ್ಯಾನರ್‌ಗಳನ್ನು ಕಟ್ಟುವಾಗ ಸೆಸ್ಕಾಂ ಕಚೇರಿಯಿಂದ ಅನುಮತಿ ಪಡೆದುಕೊಳ್ಳುವಂತೆ ತಿಳಿಸಿದ ಮಹೇಶ್ ಕುಮಾರ್, ಹಬ್ಬವನ್ನು ಎಲ್ಲರೂ ಸೇರಿ ಶಾಂತಿ ಸುವ್ಯವಸ್ಥೆಯಿಂದ ಆಚರಿಸುವಂತಾಗಬೇಕು. ಬ್ಯಾನರ್ ಬಂಟಿAಗ್ಸ್ ಧ್ವಜಗಳನ್ನು ಕಟ್ಟಲು ಸ್ಥಳೀಯ ಠಾಣೆಯಲ್ಲಿ ಅನುಮತಿ ಪಡೆದುಕೊಳ್ಳಬೇಕು ಮತ್ತು ಕಾರ್ಯಕ್ರಮ ಮುಗಿದ ಕೂಡಲೇ ಬ್ಯಾನರ್‌ಗಳನ್ನು ತೆಗೆಯಬೇಕೆಂದು ಸೂಚಿಸಿದರು. ಶಾಂತಿ ಸಭೆಯಲ್ಲಿ ವೀರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆಗಳಿAದ ಮಸೀದಿಗಳ ಮುಖಂಡರು ಭಾಗವಹಿಸಿದ್ದರು.

ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಠಾಣಾಧಿಕಾರಿಗಳಾದ ಹೆಚ್.ಎಸ್. ಪ್ರಮೋದ್, ಟಿ.ಎನ್. ಕಾವೇರಪ್ಪ, ಗ್ರಾಮಾಂತರ ಠಾಣಾಧಿಕಾರಿ ಎನ್.ಜೆ. ಲತಾ, ಮತ್ತು ವಾಣಿಶ್ರೀ, ಗೋಣಿಕೊಪ್ಪಲು ಠಾಣಾಧಿಕಾರಿ ಕಾಳೇಗೌಡ ಮತ್ತು ವೆಂಕಟೇಶ್, ಪೊನ್ನಂಪೇಟೆಯ ಜಿ. ನವೀನ್ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.