ಸಾಂಸ್ಕöÈತಿಕ ಹಾಗೂ ಐತಿಹಾಸಿಕ ಪಟ್ಟಣಗಳಲ್ಲಿ ಒಂದಾದ ವೀರಾಜ ಪೇಟೆಯು ತನ್ನ ವಿಶಿಷ್ಟ ವೈವಿಧ್ಯತೆ ಮತ್ತು ಧಾರ್ಮಿಕ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಒಂದಾದ ತೆಲುಗರ ಬೀದಿಯಲ್ಲಿ ನೆಲೆಸಿರುವ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯ ಹಾಗೂ ಅಲ್ಲಿ ಅತ್ಯಂತ ವಿಜೃಂಭಣೆಯಿAದ ಆಚರಿಸಲಾಗುವ ಗೌರಿ-ಗಣೇಶೋತ್ಸವವು ಸಾರ್ವಜನಿಕರ ಗಮನ ಸೆಳೆಯುತ್ತದೆ.
ಅಕ್ಕ - ತಂಗಿಯರಾದ ಶ್ರೀ ದಕ್ಷಿಣ ಮಾರಿಯಮ್ಮ ಹಾಗೂ ಶ್ರೀ ಅಂಗಾಳ ಪರಮೇಶ್ವರಿ ದೇವಿಯರ ದೇವಾಲಯವು ದಶಕಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಮೂಲವನ್ನು ಹೊಂದಿದ್ದು, ಕೊಡಗಿನಲ್ಲಿ ನೆಲೆಸಿದ ಕುಟುಂಬಗಳು ಈ ದೇವಾಲಯದ ನಿರ್ಮಾಣ ಮತ್ತು ಪೂಜಾ ಕೈಂಕರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಇಲ್ಲಿನ ಮುಖ್ಯ ದೇವತೆ ಅಂಗಾಳ ಪರಮೇಶ್ವರಿ (ಪಾರ್ವತಿ ದೇವಿಯ ಶಕ್ತಿ ರೂಪ) ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ನೀಗಿಸುವ ಅಭಯದಾತೆಯಾಗಿ ಪೂಜಿಸಲ್ಪಡುತ್ತಾಳೆ. ನಿತ್ಯ ಪೂಜೆ, ಶುಕ್ರವಾರ ಹಾಗೂ ಮಂಗಳವಾರದ ವಿಶೇಷ ಅಲಂಕಾರಗಳು ಮತ್ತು ತಮಿಳು-ತೆಲುಗು ಸಂಪ್ರದಾಯದAತೆ ನಡೆಯುವ ವಾರ್ಷಿಕ ಕರಗ ಉತ್ಸವಗಳು ಈ ಕ್ಷೇತ್ರಕ್ಕೆ ದೇವತಾ ಚೈತನ್ಯವನ್ನು ತುಂಬಿವೆ.
ಅAಗಾಳ ಪರಮೇಶ್ವರಿ ದೇವಾಲಯದ ಆವರಣದಲ್ಲಿ ನಡೆಯುವ ಗೌರಿ-ಗಣೇಶ ಹಬ್ಬವು ಇಡೀ ವೀರಾಜಪೇಟೆ ಪಟ್ಟಣಕ್ಕೆ ಸಂಭ್ರಮ ತರುತ್ತದೆ. ಈ ಬಾರಿ ೪೧ನೇ ವರ್ಷದ ಉತ್ಸವ ಆಚರಿಸಲ್ಪಡುತ್ತಿರುವುದು ವಿಶೇಷ.
ಈ ಉತ್ಸವವು ಶ್ರೀ ವಿನಾಯಕ ಯುವಕ ಭಕ್ತ ಮಂಡಳಿ ಎಂಬ ಹೆಸರಿನೊಂದಿಗೆ ೧೯೮೬ರಲ್ಲಿ ಪ್ರಾರಂಭಗೊAಡಿತು. ಅಂಗಾಳ ಪರಮೇಶ್ವರಿ ದೇವಾಲಯದ ಸುತ್ತಮುತ್ತಲಿನ ನಿವಾಸಿಗಳೆಲ್ಲರೂ ಒಂದಾಗಿ ಸೇರಿ, ಟಿ.ಪಿ. ಸತ್ಯನಾರಾಯಣ ಶೆಟ್ಟಿ ಅವರ ನೇತೃತ್ವದಲ್ಲಿ ಈ ಸಾರ್ವಜನಿಕ ಉತ್ಸವಕ್ಕೆ ಚಾಲನೆ ನೀಡಿದರು. ಆ ಸಂದರ್ಭದಲ್ಲಿ ಅವರೇ ಅಧ್ಯಕ್ಷರಾಗಿ ಉತ್ಸವವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.
ಪ್ರಸ್ತುತ ವಕೀಲರಾಗಿರುವ ಟಿ.ಪಿ. ಕೃಷ್ಣ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಭಕ್ತಿ ಮತ್ತು ಸಂಭ್ರಮದಿAದ ಉತ್ಸವವನ್ನು ಸಂಘಟಿಸುತ್ತಿದ್ದಾರೆ.
ಚೌತಿಯ ಸಂದರ್ಭದಲ್ಲಿ, ದೇವಸ್ಥಾನದ ಆವರಣದಲ್ಲಿ ಶಾಸ್ತೊçÃಕ್ತವಾಗಿ, ಗೌರಿ ಹಾಗೂ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ನಿತ್ಯ ಪೂಜೆ ನೆರವೇರಿಸಿ ನಿತ್ಯ ಪ್ರಸಾದ ವಿತರಿಸಲಾಗುತ್ತದೆ.
ಉತ್ಸವದ ಕೊನೆಯ ದಿನದಂದು ಚಂಡೆ ಮದ್ದಳೆ, ನಾಸಿಕ್ ಬ್ಯಾಂಡ್, ವಿದ್ಯುತ್ ದೀಪಾಲಂಕಾರ ಹಾಗೂ ಜಾನಪದ ಕಲಾ ತಂಡಗಳ ರಂಗಿನೊAದಿಗೆ ಗಣೇಶ ಮತ್ತು ಗೌರಿ ಮೂರ್ತಿಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಗೌರಿಕೆರೆಯಲ್ಲಿ ವಿಸರ್ಜನೆಗೊಳ್ಳುತ್ತದೆ.
ತೆಲುಗರ ಬೀದಿಯ ಈ ಗೌರಿ-ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ವೀರಾಜಪೇಟೆಯ ಜನರ ಸೌಹಾರ್ದತೆ, ಐಕ್ಯತೆ ಮತ್ತು ಸಾಂಸ್ಕöÈತಿಕ ಭವ್ಯತೆಯ ಪ್ರತೀಕವಾಗಿದೆ.
-ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧