ಮಡಿಕೇರಿ, ಆ.೨೩: ನಮ್ಮೆಲ್ಲರ ಜೀವನ ಪರಿಪೂರ್ಣ ಎನಿಸಿಬೇಕಾದರೆ ಹಿರಿಯರ ಮಾರ್ಗದರ್ಶನ ಅತ್ಯಗತ್ಯ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವAಡ ಮುತ್ತಪ್ಪ ಹೇಳಿದ್ದಾರೆ. ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಯೋಜಿತ ಹಿರಿಯ ಜೀವಿಗಳಿಗೆ ನಮನ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸನ್ಮಾನಿತರಾದ ಡಾ. ಕೆ.ಬಿ. ಸೂರ್ಯ ಕುಮಾರ್ ಮಾತನಾಡಿ, ಹಿಂದಿನ ಕಾಲ ಮತ್ತು ಈಗಿನ ಕಾಲದ ವ್ಯತ್ಯಾಸವು ಪ್ರಕೃತಿ ನಿಯಮದಂತೆ ಬದಲಾಗಿದೆ, ಮನೆಯಲ್ಲಿ ಇರುವ ಹಿರಿಯರು ಬದುಕಿರುವ ಜ್ಞಾನ ಭಂಡಾರದAತೆ. ಅಮೂಲ್ಯ ಕಥೆ ಪುಸ್ತಕಗಳು ಎಂದರು.
ಸನ್ಮಾನಿತರಾದ ಗೌರಮ್ಮ ಮಾದಮ್ಮಯ್ಯ ಮಾತನಾಡಿ, ಹಿರಿಯರಿಗೆ ಪ್ರೀತಿ ಸುರಕ್ಷತೆ ಮತ್ತು ಸ್ಪಂದನ ಅತಿ ಮುಖ್ಯ, ಅವುಗಳನ್ನು ನೀಡಿ ಸಂತೋಷದಿAದ ಇರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ.ಚೇತನ್ ಜಿ.ಡಿ. ಮಾತನಾಡಿ, ಹಿರಿಯರ ವಿಚಾರ ಹಾಗೂ ಸರಳತೆ ಮತ್ತು ಜ್ಞಾನ ಬದುಕಿನ ಪಾಠಗಳನ್ನು ಅರಿತು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿನಿ ಭೂಮಿಕ ಎಸ್ ಆರ್ ಮಾತನಾಡಿ, ಹಿರಿಯರ ನೆರಳಿನಲ್ಲಿ ಬೆಳೆದು ಬಂದ ಜೀವನಕ್ಕೆ ಹಿರಿಯರು ನೀಡುವ ಅನುಭವದ ಬೆಳಕು ಎಂದಿಗೂ ಕಡಿಮೆಯಾಗುವುದಿಲ್ಲ ಎಂದರು. ವಿದ್ಯಾರ್ಥಿನಿ ಪಲ್ಲವಿ ಕಾವೇರಮ್ಮ ಮಾತನಾಡಿ ನಮ್ಮ ಹಿರಿಯರು ಅಪಾರ ಜ್ಞಾನದ ಭಂಡಾರವನ್ನು ಹೊಂದಿದ್ದಾರೆ ಎಂದರು. ಪ್ರಾಂಶುಪಾಲರಾದ ಸವಿತಾ ಎಂ.ಜಿ. ಮಾತನಾಡಿ, ಕುಟುಂಬ ಮತ್ತು ಸಮಾಜದೊಂದಿಗೆ ಹಿರಿಯರಿಗಿರುವ ಕಾಳಜಿಯನ್ನು ನಾವು ನೆನಪಿಸಿಕೊಳ್ಳಬೇಕು ಎಂದರು.
ಪೊದುವಾಡ ಕೃತಿಕ ಸುಜಯ್ ಸ್ವಾಗತಿಸಿ, ಸಪ್ನ ಜೆ . ಎಂ.ನಿರೂಪಿಸಿ, ಕೃತಿಕ ಬಿ.ಟಿ. ವಂದಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಡಾ. ತಾರಾ ನಂದನ್ ಯಶೋದ ಪ್ರಕಾಶ್, ಕ್ಯಾರಿ ಕಾರ್ಯಪ್ಪ, ಶ್ರೀಹರಿ, ನಿಶಾಂತ್ ಬೆಳ್ಯಪ್ಪ, ದಿವ್ಯ ಚೇತನ್, ಸುಮನಾ ಶ್ರೀಹರಿ ಪಾಲ್ಗೊಂಡಿದ್ದರು. ಶಾಲಾ ಮುಖ್ಯಶಿಕ್ಷಕಿ ಸವಿತಾ ಎಂ.ಜಿ ಹಾಜರಿದ್ದರು.