ಸಚಿವ ಸ್ಥಾನದ ವಿಶ್ವಾಸವಿತ್ತು

ಸಚಿವ ಸ್ಥಾನದಿಂದ ವಂಚಿತಗೊAಡ ಕುರಿತು ಪ್ರತಿಕ್ರಿಯಿಸಿದ ಪೊನ್ನಣ್ಣ ಅವರು, ಹಲವು ವರ್ಷಗಳ ಹಿಂದೆ ಕೊಡಗಿನ ಮೂವರು ಸಚಿವರಾಗಿದ್ದರು. ನಂತರ ದೀರ್ಘಾವಧಿಗೆ ಸಚಿವ ಭಾಗ್ಯ ಜಿಲ್ಲೆಗೆ ದೊರೆತಿಲ್ಲ ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಅಡಗಿದೆ. ಹಲವು ಕ್ಷೇತ್ರಗಳನ್ನೊಳಂಡ ಜಿಲ್ಲೆ, ಜಾತಿ ಪ್ರಾತಿನಿಧ್ಯ ಹೀಗೆ ನಾನಾ ವಿಷಯದಡಿ ಸಚಿವ ಸ್ಥಾನ ನಿರ್ಧಾರವಾಗುತ್ತದೆ. ಈ ನಡುವೆ ತನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿತ್ತು. ಆದರೆ, ಉಪಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಆಶ್ಚರ್ಯ ಮೂಡಿಸಿತು. ಇದೊಂದು ಸಂವಿಧಾನಾತ್ಮಕ, ಗೌರವಾನ್ವಿತ ಹಾಗೂ ದೊಡ್ಡ ಜವಾಬ್ದಾರಿ ಹೊಂದಿರುವ ಹುದ್ದೆಯಾಗಿದೆ. ಆದರೆ ಕೆಲವು ಪರಿಮಿತಿಗಳಿರುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾನು ಕೆಪಿಸಿಸಿಯಲ್ಲಿ ಕಾನೂನು ಸಲಹೆಗಾರನಾಗಿದ್ದ ಹಿನ್ನೆಲೆ ತನಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ ಎಂದರು.