ಒಳ್ಳೆ ಕೆಲಸ ಮಾಡಿದರೆ ಜನ ಗುರುತಿಸುತ್ತಾರೆ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ನಡೆಸುವುದರಿಂದ ಜನರ ಮನಸ್ಸು ಗೆಲ್ಲಲಾಗುವುದಿಲ್ಲ ಎಂದು ವಿಪಕ್ಷ ನಾಯಕರಿಗೆ ಪೊನ್ನಣ್ಣ ಟಾಂಗ್ ನೀಡಿದರು.
ಕೋವಿಡ್ ಸಮಯದಲ್ಲಿ ನಾನು ಮಾಡಿದ ಸಹಾಯದಿಂದ ಇಂದು ಶಾಸಕನಾಗಿದ್ದೇನೆ. ಆದರೆ, ವಿಪಕ್ಷದವರು ಟಿಕೆಟ್ ಪಡೆಯುವುದಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜನಪರ ಕೆಲಸ ಮಾಡಿ. ನಾನು ಎಂದಿಗೂ ದ್ವೇಷ ರಾಜಕಾರಣ ಮಾಡುವುದಿಲ್ಲ. ಆದರೆ ನನ್ನ ಅಥವಾ ಕುಟುಂಬದ ವಿಷಯಕ್ಕೆ ಬಂದರೆ ಸುಮ್ಮನೆ ಕೂರುವುದಿಲ್ಲ. ನನ್ನ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ, ಆಡಳಿತ ಹಸ್ತಕ್ಷೇಪ, ಒತ್ತಡ ಹಾಕಿದ ಉದಾಹರಣೆಗಳಿದ್ದರೆ ತೋರಿಸಿ ಎಂದು ಸವಾಲೆಸೆದರು.