ಗೋಣಿಕೊಪ್ಪ ವರದಿ, ಆ. ೨೨: ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಎ. ಡಿವಿಜನ್ ಹಾಕಿ ಲೀಗ್ ಟೂರ್ನಿಯಲ್ಲಿ ಬಲಂಬೇರಿ, ಕೂರ್ಗ್ ಚಾಲೆಂಜರ್ಸ್ ಹಾಗೂ ಚಾರ್ಮರ್ಸ್ ಗೆಲುವು ಪಡೆದವು.
ಬಲಂಬೇರಿ ಮಹಾದೇವ ತಂಡವು ಬಿಬಿಸಿ ಗೋಣಿಕೊಪ್ಪ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ಬಲಂಬೇರಿ ಪರ ಕಾರ್ಲ್ ಕಾರ್ಯಪ್ಪ ೨, ಕಾರ್ತಿಕ್, ಕವನ್ ಒಂದೊAದು ಗೋಲು ಹೊಡೆದರು. ಕೋಣನಕಟ್ಟೆ ಇಲೆವೆನ್ ತಂಡ ಬೇಗೂರು ಮಹಾದೇವ ವಿರುದ್ದ ೭-೨ ಗೋಲುಗಳಿಂದ ಜಯಿಸಿತು. ಕೋಣನಕಟ್ಟೆ ಪರ ಲೇಖನ್, ಪಿ. ಯಶ್ವಿನ್, ಅಚ್ಚಯ್ಯ ತಲಾ ೨ ಗೋಲು, ಪಿ. ಸೋಮಣ್ಣ ಬೇಗೂರು ಆಟಗಾರರಾದ ಪೆಮ್ಮಯ್ಯ, ಮಾರ್ಚೊ ಒಂದೊAದು ಗೋಲು ದಾಖಲಿಸಿದರು. ಬೊಟ್ಟಿಯತ್ನಾಡ್ ಕುಂದ ತಂಡಕ್ಕೆ ಟವರ್ಸ್ ಇಲೆವೆನ್ ವಿರುದ್ದ ೩-೧ ಗೋಲುಗಳ ಗೆಲುವು ಲಭಿಸಿತು. ಬೊಟ್ಟಿಯತ್ನಾಡ್ ಪರ ಪಿ.ವಿ. ಸೋಮಣ್ಣ ೨, ನಾಚಪ್ಪ ಟವರ್ಸ್ ಪರ ನಾಣಯ್ಯ ಒಂದೊAದು ಗೋಲು ಹೊಡೆದರು.
ಕೂರ್ಗ್ ಚಾರ್ಮರ್ಸ್ ತಂಡ, ಕ್‌ಗ್ಗನಾಡ್ ಫ್ಲೆöÊಯಿಂಗ್ ಎಲ್ಬೋ ತಂಡವನ್ನು ೨-೦ ಗೋಲುಗಳಿಂದ ಪರಾಭವ ಗೊಳಿಸಿತು. ಚಾರ್ಮರ್ಸ್ ಆಟಗಾರರಾದ ಯಶಸ್ ಪೊನ್ನಪ್ಪ, ಎಂ.ಡಿ. ನಾಣಯ್ಯ ಗೋಲು ಹೊಡೆದರು. ಮಲ್ಮ ಕಕ್ಕಬ್ಬೆ ತಂಡಕ್ಕೆ ಯುಎಎಸ್ಸಿ ಬೇರಳಿನಾಡ್ ವಿರುದ್ಧ ೧-೦ ಗೋಲುಗಳ ಜಯ ಸಿಕ್ಕಿತು. ಮಲ್ಮ ಪರ ಪ್ರಜ್ವಲ್ ಏಕೈಕ ಗೋಲು ಹೊಡೆದರು.
ಕೂರ್ಗ್ ಚಾಲೆಂಜರ್ಸ್ ತಂಡ ಸೋಮವಾರಪೇಟೆ ಡಾಲ್ಪಿನ್ಸ್ ತಂಡವನ್ನು ೫-೧ ಗೋಲುಗಳಿಂದ ಮಣಿಸಿತು. ಚಾಲೆಂಜರ್ಸ್ ಪರ ಬೋಪಣ್ಣ, ವಿನೀಶ್ ತಲಾ ೨ ಗೋಲು, ಮಿಲನ್ ಹಾಗೂ ಡಾಲ್ಪಿನ್ಸ್ ಪರ ಕಾಳಿಮುತ್ತು ಗೋಲು ಬಾರಿಸಿದರು.