ಸೋಮವಾರಪೇಟೆ, ಆ. ೨೨: ತಾಲೂಕು ಸಾರ್ವಜನಿಕ ಆಸ್ಪತ್ರೆಯ ತುರ್ತು ಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಘಟಕದ ಡಿಫಿಬ್ರಿಲೇಟರ್ ಸುಟ್ಟು ಕರಕಲಾಗಿದೆ. ಬೆಂಕಿ ಉರಿಯುತ್ತಿದ್ದ ಸಂದರ್ಭ ಅಲ್ಲಿದ್ದ ಸಿಬ್ಬಂದಿ ತಕ್ಷಣಕ್ಕೆ ಮೈನ್‌ಸ್ವಿಚ್ ಆಫ್ ಮಾಡುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೊತ್ತಿ ಉರಿಯುತ್ತಿದ್ದ ಡಿಫಿಬ್ರಿಲೇಟರ್‌ನ್ನು ಕಿತ್ತು ಹೊರ ತಂದು ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ಯಾವುದೇ ರೋಗಿ ಇಲ್ಲದ್ದರಿಂದ ಹೆಚ್ಚಿನ ಸಮಸ್ಯೆ ಎದುರಾಗಿಲ್ಲ.