ಮಡಿಕೇರಿ, ಆ. ೨೨: ಗೌಡ ಸಮಾಜಗಳ ಪರವಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಗೂ ಬೆಂಗಳೂರು ಗೌಡ ಸಮಾಜದ ವತಿಯಿಂದ, ಸಮಾಜದ ಪ್ರಮುಖರು, ವಿಧಾನಸೌಧದಲ್ಲಿ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಭೇಟಿಯಾಗಿ ಅಭಿನಂದಿಸಿದರು.
ಶಾಸಕ ಪೊನ್ನಣ್ಣ ಅವರಿಗೆ ಈಗ ದೊರೆತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನವು ಎಲ್ಲರಿಗೂ ಹೆಮ್ಮೆಯನ್ನುಂಟು ಮಾಡಿದ್ದು, ಶಾಸಕರ ಸೇವೆ ಮತ್ತಷ್ಟು ವ್ಯಾಪಿಸಲಿ ಎಂದು ಹಾರೈಸಿದರು.
ಈ ಸಂದರ್ಭ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಉಪಾಧ್ಯಕ್ಷ ಡಾ. ರಾಜೇಶ್ ತೇನನ, ಪ್ರಮುಖರಾದ ನಂಗಾರು ನಿಂಗರಾಜು, ಗಣಿಪ್ರಸಾದ್ ಚಿಲ್ಲನ, ಶಿವಪ್ರಕಾಶ್ ನಡುಬೆಟ್ಟಿರ, ಕುಲ್ಲಚನ ಹೇಮಂತ್, ಅಯ್ಯೆಟಿ ಮನೋಜ್, ಮೋಹನ್ ಕುದ್ಪಾಜೆ, ಬಿಪಿನ್ ಬೆಕಲ್, ಪಾಣತಲೆ ಪಳಂಗಪ್ಪ, ಕುಂಬಗೌಡನ ಸೋಮಣ್ಣ, ಅಜಿತ್ ಕುಂಚಾಲಿ ಹಾಗೂ ವಿವಿಧ ಗೌಡ ಸಮಾಜಗಳ ಪ್ರತಿನಿಧಿಗಳು ಹಾಜರಿದ್ದರು.