ಮುಳ್ಳೂರು, ಆ. ೨೨: ‘ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಈ ದಿನದಲ್ಲಿ ಯುವ ಸಂಘಟನೆ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ದುಂಡಳ್ಳಿ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಶಿವಲಿಂಗ ಶಿವಚಾರ್ಯ ಸ್ವಾಮೀಜಿ ಹೇಳಿದರು.
ಕೊಡಗು ಜಿಲ್ಲಾ ಬಿಜೆಪಿ ಯವ ಮೋರ್ಚಾ ಮತ್ತು ಸೋಮವಾರಪೇಟೆ ತಾಲೂಕು ಯುವ ಮೋರ್ಚಾ ವತಿಯಿಂದ ಸಮೀಪದ ಗುಡುಗಳಲೆಯ ಸಮರ್ಥ್ ಶ್ರೀಧರ್ ಅವರ ಗದ್ದೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರು, ಮಕ್ಕಳು ಮೊಬೈಲ್ ಆಟಗಳಲ್ಲಿ ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಸುವಂತಹ ನೈಜ ಕ್ರೀಡೆಗಳನ್ನು ನಿರ್ಲಕ್ಷಿಸುತ್ತಿರುವುದು ಬೇಸರದ ಸಂಗತಿ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಬಿಜೆಪಿ ಕ್ರೀಡಾಕೂಟವನ್ನು ನಡೆಸುವ ಮೂಲಕ ಗ್ರಾಮೀಣ ಭಾಗದ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು. ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ದಕ್ಷಿಣ ಕನ್ನಡ ಕೊಡಗು ಜಿಲ್ಲಾ ಬಿಜೆಪಿ ಉಸ್ತುವಾರಿ ಭಾರತೀಶ್, ಉದ್ಯಮಿ ಹರಪಳ್ಳಿ ರವಿಂದ್ರ ಮಾತನಾಡಿದರು
ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗೌತಮ್ ಗೌಡ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಕ್ರಿಡಾ ಸಮಿತಿ ಅಧ್ಯಕ್ಷ ನಿತಿನ್, ಒಬಿಸಿ ಜಿಲ್ಲಾ ಕಾರ್ಯದರ್ಶಿ ಎಸ್.ಎನ್.ರಘು, ಪ್ರಮುಖರಾದ ಬಿ.ಎಸ್.ಅನಂತ್ ಕುಮಾರ್, ಪೂರ್ಣಿಮಾ ಕಿರಣ್, ಭುವನೇಶ್ವರಿ, ಪೂರ್ಣಿಮಾ ಗೋಪಾಲ್, ತಂಗಮ್ಮ ಮನುಕುಮಾರ್ ರೈ, ಪ್ರವೀಣ್, ರಕ್ಷಿತ್, ಅನಿಲ್, ಮೋಕ್ಷಿತ್, ಕವಿತಾ ವಿರೂಪಾಕ್ಷ, ಇಂದಿರಾ ಮೊಣ್ಣಪ್ಪ, ಮುಂತಾದವರು ಹಾಜರಿದ್ದರು. ಕೆಸರುಗದ್ದೆ ಕ್ರೀಡಾಕೂಟದಲ್ಲಿ ತಾಲೂಕು, ಜಿಲ್ಲೆ ಮತ್ತು ದಕ್ಷಿಣ ಕನ್ನಡದ ಸುಳ್ಯ ಸೇರಿದಂತೆ ಸುಮಾರು ೩೦ ತಂಡಗಳು ಭಾಗವಹಿಸಿದ್ದವು.