ಮಡಿಕೇರಿ : ಕಡಗದಾಳು ಸರ್ಕಾರಿ ಪ್ರೌಢÀಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಆಯೋಜಿತವಾಗಿತ್ತು. ಗ್ರಾಮದ ಹಿರಿಯರಾದ, ಶಾಲೆಯ ಹಳೇ ವಿದ್ಯಾರ್ಥಿಗಳೂ ಆಗಿದ್ದ ಸುಮಿತ್ರಾ ಮತ್ತು ತಂಗಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಪ್ರಸಾದ್ ಗೌಡ, ಮಕ್ಕಳು ಹಿರಿಯರನ್ನು ಮನೆಯಲ್ಲಿ ಮತ್ತು ಸಮಾಜದಲ್ಲಿ ಗೌರವ ಭಾವನೆಯಿಂದ ಕಾಣಬೇಕು ಎಂದರು. ರೋಟರಿ ಮಿಸ್ಟಿ ಹಿಲ್ಸ್ ಜಿಲ್ಲೆಯಾದ್ಯಂತಲಿನ ೨೬ ಶಾಲೆಗಳಲ್ಲಿ ವಿಶ್ವಹಿರಿಯ ನಾಗರಿಕರ ದಿನದ ಪ್ರಯುಕ್ತ ೮೫ ಹಿರಿಯಜೀವಿಗಳನ್ನು ಗೌರವಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಮಾಹಿತಿ ನೀಡಿದರು. ಶಾಲಾ ಮುಖ್ಯಶಿಕ್ಷಕಿ ಡೈಸಿ ಮಾತನಾಡಿ, ಹಿರಿಯರನ್ನು ಗೌರವಿಸುವುದು ವಿದ್ಯಾರ್ಥಿಗಳ ಜೀವನದಲ್ಲಿ ಆದ್ಯತೆಯಾಗಬೇಕೆಂದು ಕರೆ ನೀಡಿದರು. ಶಾಲಾ ಶಿಕ್ಷಕಿ ಪಿ.ಕೆ. ಪವಿತ್ರ ವಂದಿಸಿದ ಕಾರ್ಯಕ್ರಮವನ್ನು ಮಿಸ್ಟಿ ಹಿಲ್ಸ್ ನಿರ್ದೇಶಕ ಮೋಹನ್ ಪ್ರಭು ನಿರ್ವಹಿಸಿದರು. ಶಿಕ್ಷಕಿಯರಾದ ನಮಿತಾ ಮತ್ತು ಪವಿತ್ರ ಸನ್ಮಾನಿತ ಹಿರಿಯರನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ರೇಷ್ಮ ಮತ್ತು ರಾಘವಿ ಹಿರಿಯರ ಮಹತ್ವವನ್ನು ಸಭೆಗೆ ಹೇಳಿದರು. ಶಿಕ್ಷಕಿ ಭಾರತಿ ನಿರೂಪಿಸಿದರು. ಇನ್ನರ್ ವೀಲ್ ನಿರ್ದೇಶಕಿ ಶಮ್ಮಿ ಪ್ರಭು, ಶಾಲಾ ಶಿಕ್ಷಕಿಯರು ಹಾಜರಿದ್ದರು.