ಗೋಣಿಕೊಪ್ಪ ವರದಿ, ಆ. ೨೩ ; ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಎ ಡಿವಿಜನ್ ಹಾಕಿ ಲೀಗ್ ಟೂರ್ನಿಯಲ್ಲಿ ಕೋಣನಕಟ್ಟೆ, ಬೇರಳಿನಾಡ್, ಕೂರ್ಗ್ ಚಾಲೆಂಜರ್ಸ್ ಗೆಲುವು ಪಡೆದುಕೊಂಡಿದೆ.

ಕೋಣನಕಟ್ಟೆ ಇಲೆವೆನ್ ತಂಡವು ಬಲಂಬೇರಿ ಮಹಾದೇವ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ೪-೨ ಗೋಲುಗಳಿಂದ ಸೋಲಿಸಿತು. ಕೋಣನಕಟ್ಟೆ ಪರ ಯಶ್ವಿನ್ ೩, ಅಚ್ಚಯ್ಯ ೧, ಬಲಂಬೇರಿ ಪರ ಅಪ್ಪಚ್ಚು ೨ ಗೋಲು ಹೊಡೆದರು.

ಅಮ್ಮತ್ತಿ ರಾಯಲ್ಸ್ ತಂಡವು ಕಕ್ಕಬ್ಬೆ ಮಲ್ಮ ತಂಡದ ವಿರುದ್ಧ ೨-೦ ಗೋಲುಗಳ ಜಯ ಸಾಧಿಸಿತು. ಅಮ್ಮತ್ತಿ ಪರ ಲೆಹರ್, ಗ್ಯಾನ್ ಗೋಲು ಹೊಡೆದರು.

ಯುಎಸ್ಸಿ ಬೇರಳಿನಾಡ್ ಹಾಗೂ ಅಂಜಿಗೇರಿ ನಾಡ್ ತಂಡಗಳ ನಡುವಿನ ಪಂದ್ಯ ೨-೨ ಗೋಲುಗಳ ಟೈ ಫಲಿತಾಂಶ ನೀಡಿತು. ಬೇರಳಿನಾಡ್ ಆಟಗಾರ ನಾಚಪ್ಪ, ರಿಶಿ ಕುಶಾಲಪ್ಪ ತಲಾ ೧ ಗೋಲು, ಅಂಜಿಗೇರಿ ಆಟಗಾರ ಸುಪ್ರಿತ್ ೨ ಗೋಲು ಬಾರಿಸಿದರು.

ಕೂರ್ಗ್ ಚಾಲೆಂಜರ್ಸ್ ತಂಡವು ನಾಪೋಕ್ಲು ಶಿವಾಜಿ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಚಾಲೆಂಜರ್ಸ್ ಪರ ಮುದ್ದಪ್ಪ, ವಿಶಾಸ್ ಗೋಲು ದಾಖಲಿಸಿದರು.

ಬೊಟ್ಟಿಯತ್ನಾಡ್ ತಂಡ ಮಡಿಕೇರಿ ಚಾರ್ಮರ್ಸ್ ತಂಡದ ವಿರುದ್ಧ ೧-೦ ಗೋಲುಗಳ ಜಯ ಸಾಧಿಸಿತು. ಬೊಟ್ಟಿಯತ್ನಾಡ್ ಪರ ಹುಮೈಜ್ ಏಕೈಕ ಗೋಲು ಹೊಡೆದರು.

ಸೋಮವಾರಪೇಟೆ ಡಾಲ್ಫಿನ್ಸ್ ತಂಡಕ್ಕೆ ಎಎಸ್ಸಿ ಅಮ್ಮತ್ತಿ ವಿರುದ್ಧ ೧-೦ ಗೋಲುಗಳ ಗೆಲುವು ಲಭಿಸಿತು. ಸೋಮವಾರಪೇಟೆ ಪರ ರಿತೇಶ್ ಏಕೈಕ ಗೋಲು ದಾಖಲಿಸಿದರು.