ಮಡಿಕೇರಿ: ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಜಂಬೂರು ಎಫ್.ಎಂ.ಸಿ ಬಡಾವಣೆಯಲ್ಲಿ ೮೦ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಮಂತರ್ ಗೌಡ ಭಾಗವಹಿಸಿದ್ದರು.
ಪ್ರಮುಖರಾದ ಹರೀಶ್ ಪೊನ್ನಂಬಲ, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಂತೋಣಿ, ಪ್ರಮುಖರಾದ ಲೋಕೇಶ್, ಗಪ್ಪು ಸೋಮಯ್ಯ ಹಾಗೂ ಇತರರು ಇದ್ದರು. ಬಡಾವಣೆಯ ಸಾರ್ವಜನಿಕರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹಾಜರಿದ್ದರು. ಶಾಸಕ ಡಾ. ಮಂತರ್ ಗೌಡ ಅವರು ಬಡಾವಣೆಯ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಹೆಚ್ಚುವರಿಯಾಗಿ ರೂ.೧೦ ಲಕ್ಷ ಅನುದಾನ ಕಲ್ಪಿಸಿ ಜನತೆಯ ಅನೂಕೂಲ ಸಲುವಾಗಿ ನೂತನ ಅಡುಗೆ ಕೋಣೆ, ನೀರಿನ ವ್ಯವಸ್ಥೆ ಹಾಗೂ ಮೇಲ್ಛಾವಣಿ ಶೀಟು ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸ್ಥಳದಲ್ಲಿ ಇದ್ದ ಇಂಜಿನಿಯರಿAಗ್ ಅಧಿಕಾರಿಗೆ ಸೂಚಿಸಿದರು. ಅಲ್ಲದೆ ಶುದ್ಧ ಕುಡಿಯುವ ನೀರು ಘಟಕದ ಸ್ಥಾಪನೆಗೆ ನಿರ್ದೇಶನ ನೀಡಿದರು.