ಕೊಡ್ಲಿಪೇಟೆ, ಆ. ೨೧: ಈದ್ ಮಿಲಾದ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿವಿಧ ಸಮುದಾಯದ ಮುಖಂಡರನ್ನು ಒಳಗೊಂಡAತೆ ಸಭೆ ನಡೆಯಿತು.
ಸಭೆಯಲ್ಲಿ ಈದ್ ಮಿಲಾದ್ ಮೆರವಣಿಗೆ ಮತ್ತು ಕಾರ್ಯಕ್ರಮವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನಡೆಸುವ ಕುರಿತು ಚರ್ಚಿಸಲಾಯಿತು. ಮೆರವಣಿಗೆ ನಡೆಯುವ ಮಾರ್ಗ, ಸಂಚಾರ ವ್ಯವಸ್ಥೆ, ಭದ್ರತಾ ಕ್ರಮಗಳು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಶನಿವಾರಸಂತೆ ಠಾಣೆಯ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಮಾತನಾಡಿ, ಕಾರ್ಯಕ್ರಮದ ವೇಳೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟಾಗದAತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶದೊAದಿಗೆ ಆಚರಿಸುವಂತೆ ಮನವಿ ಮಾಡಿದರು.ಈದ್-ಮಿಲಾದ್ ಅಂಗವಾಗಿ ವೇದಿಕೆ ಕಾರ್ಯಕ್ರಮ ಹಾಗೂ ಮೀಲಾದ್ ಸಂದೇಶ ಜಾಥಾವನ್ನು ಆಯೋಜಿಸಿರುವ ಕುರಿತು ಸಭೆಯಲ್ಲಿ ಹಾಜರಿದ್ದ ಮಸೀದಿ ಸಮಿತಿಗಳ ಪ್ರಮುಖರು ಮಾಹಿತಿ ನೀಡಿದರು.
ಸಭೆಯಲ್ಲಿ ಕೊಡ್ಲಿಪೇಟೆ ಜಾಮೀಯಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಜಾಫರ್ ಸಾದಿಕ್, ಕಾರ್ಯದರ್ಶಿ ಮನ್ಸೂರ್ ಸಾಬ್, ಮದ್ರಸ ಸಮಿತಿಯ ಅಧ್ಯಕ್ಷ ಶಾಹಿದ್ ಹಾಗೂ ಪದಾಧಿಕಾರಿಗಳು, ಹ್ಯಾಂಡ್‌ಪೋಸ್ಟ್ ಮಸ್ಜಿದ್ ಆಡಳಿತ ಸಮಿತಿ ಕಾರ್ಯದರ್ಶಿ ಹನೀಫ್ ಎಂ.ಎA., ಖಜಾಂಚಿ ಬಾಸಿತ್, ಸದಸ್ಯರಾದ ಸಾಬ್ಜಾನ್, ಮುಖಂಡರಾದ ಔರಂಗಜೇಬ್, ಕಲ್ಲಾರೆ ಮಸ್ಜಿದ್‌ನ ದಾವೂದ್ ಶಾಂತಪುರ ಮುಂತಾದವರು ಇದ್ದರು.
ಕೊಡ್ಲಿಪೇಟೆ ಉಪ ಠಾಣೆಯ ಎ.ಎಸ್.ಐ ಲಕ್ಷಿö್ಮ ಪ್ರಸಾದ್ ರೈ, ಪೇದೆ ಮುನಾವರ್ ಪಾಷಾ ಇದ್ದರು.