ವೀರಾಜಪೇಟೆ: ಸ್ವಾತಂತ್ರö್ಯಕ್ಕೆ ಹೋರಾಡಿದ ಹಿರಿಯರನ್ನು ನೆನಪಿಸಿಕೊಂಡು ಅವರಿಗೆ ಗೌರವ ಸೂಚಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದು ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಕೆ ಪದ್ಮ ಅಭಿಪ್ರಾಯ ವ್ಯಕ್ತಗೊಳಿಸಿದರು.
ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಪದವಿ ಹಾಗೂ ಪದವಿಪೂರ್ವ ವಿಭಾಗದಿಂದ ಆಯೋಜಿಸಲಾಗಿದ್ದ ೮೦ನೇ ಸ್ವಾತಂತ್ರ÷್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವಿಂದು ಉತ್ತಮ ಜೀವನವನ್ನು ನಡೆಸುತ್ತಿದ್ದೇವೆ, ಯಾರದೇ ದಾಸ್ಯಕ್ಕೆ ಒಳಪಡದೆ ಸ್ವಾತಂತ್ರö್ಯವನ್ನು ಅನುಭವಿಸುತ್ತಿದ್ದೇವೆ, ಅದಕ್ಕೆ ಮೂಲ ಕಾರಣ ಅಸಂಖ್ಯಾತ ದೇಶಭಕ್ತ ಸ್ವಾತಂತ್ರö್ಯ ಹೋರಾಟಗಾರರ ನಿಸ್ವಾರ್ಥ ಸೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ ಕೆ.ಜಿ ವೀಣಾ, ದೇಶಾಭಿಮಾನ, ದೇಶಪ್ರೇಮ ಕೇವಲ ಒಂದು ದಿನಕ್ಕೆ ಮಿಸಲಾಗಿರದೇ ಸದಾ ದೇಶವನ್ನು ಗೌರವಿಸುವ ಗುಣ ನಮ್ಮಲ್ಲಿರಬೇಕು ಎಂದರು.
ಸ್ವಾAತAತ್ರ÷್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ವಿಭಾಗದಲ್ಲಿ ಭಾಷಣ ಸ್ಪರ್ಧೆ ನಡೆಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪದವಿ ವಿಭಾಗದ ಐಕ್ಯೂಎಸಿ ಸಂಯೋಜಕ ಎಲ್.ಆರ್ ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಮುಖ್ಯಸ್ಥ ಸೋಮಣ್ಣ, ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಬೋಜಮ್ಮ, ಎನ್.ಎಸ್.ಎಸ್. ಅಧಿಕಾರಿ ಸುನಿಲ್ ಕುಮಾರ್, ಅಧೀಕ್ಷಕ ಸೋಮನಾಥ್, ಪದವಿಪೂರ್ವ ವಿಭಾಗದ ಉಪ ಪ್ರಾಂಶುಪಾಲೆ ದಮಯಂತಿ, ಎನ್.ಎಸ್.ಎಸ್ ಅಧಿಕಾರಿ ಅನುಪಮ, ಉಪನ್ಯಾಸಕರಾದ ಗಾಯತ್ರಿ, ಅಕ್ಷಿತಾ ನಾಯ್ಕ್, ಡಯಾನ ಉಪನ್ಯಾಸಕ ವರ್ಗ, ಆಡಳಿತಾತ್ಮಕ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.