ಮಡಿಕೇರಿ, ಆ. ೨೧: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ನ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಕಾಲೇಜಿನ ಉಪನಾಯಕಿಯಾಗಿ ಆಶಿತಾ ವಿ. ತೃತೀಯ ಬಿ.ಎ, ಕಾರ್ಯದರ್ಶಿಯಾಗಿ ಪೂಜ ಬಿ.ಪಿ ತೃತೀಯ ಬಿ.ಕಾಂ, ಸಹಕಾರ್ಯದರ್ಶಿಯಾಗಿ ಹನಿಕ ದ್ವಿತೀಯ ಬಿ.ಕಾಂ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಲಿಖಿತ ತೃತೀಯ ಬಿ.ಕಾಂ, ಸಹ ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಪುಣ್ಯ ದ್ವಿತೀಯ ಬಿ.ಕಾಂ, ಕ್ರೀಡಾ ಕಾರ್ಯದರ್ಶಿಯಾಗಿ ಅಮೃತ ಎಂ.ಎಸ್ ತೃತೀಯ ಬಿ.ಕಾಂ, ಸಹ ಕ್ರೀಡಾ ಕಾರ್ಯದರ್ಶಿಯಾಗಿ ರಶ್ಮಿತ ದ್ವಿತೀಯ ಬಿ.ಕಾಂ ಎನ್.ಎಸ್.ಎಸ್ ನಾಯಕಿಯಾಗಿ ಬಬಿತ ದ್ವಿತೀಯ ಬಿ.ಕಾಂ, ರೇರ್ಸ್ ನಾಯಕಿಯಾಗಿ ಉಮಾವತಿ ತೃತೀಯ ಬಿ.ಎ, ಹಾಗೂ ತೃತೀಯ ಬಿ.ಎ ತರಗತಿ ನಾಯಕಿಯಾಗಿ ಸೌಜನ್ಯ ಎಂ.ಎಸ್, ತೃತೀಯ ಬಿ.ಕಾಂ ತರಗತಿಯ ನಾಯಕಿಯಾಗಿ ಸ್ಪಂದನ, ದ್ವಿತೀಯ ಬಿ,ಎ ತರಗತಿ ನಾಯಕಿಯಾಗಿ ವಿಮಲ, ದ್ವಿತೀಯ ಬಿ.ಕಾಂ ತರಗತಿಯ ನಾಯಕಿಯಾಗಿ ಹುದಾ ಪಜ್ಲಿ, ಪ್ರಥಮ ಬಿ.ಎ ತರಗತಿ ನಾಯಕಿಯಾಗಿ ವಂದನ, ಪ್ರಥಮ ಬಿ.ಕಾಂ ತರಗತಿ ನಾಯಕಿಯಾಗಿ ಶಶಿಕಲಾ ಆಯ್ಕೆಯಾದರು.
ಕಾಲೇಜಿನ ಪ್ರಾಂಶುಪಾಲ ಡಾ. ವೇಣುಗೋಪಾಲ್ ಹೆಚ್.ಎಸ್ ಹಾಜರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಕಾಲೇಜಿನ ದೈಹಿಕ ಶಿಕ್ಷಕರಾದ ರಾಖಿ ಪೂವಣ್ಣ, ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ದೀಪ ಎಂ.ಆರ್ ಕನ್ನಡ ವಿಭಾಗದ ಮುಖ್ಯಸ್ಥ ಉದಯ ಕುಮಾರ ನಡೆಸಿಕೊಟ್ಟರು.