ಹೆಬ್ಬಾಲೆ, ಆ. ೨೧: ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ಜೆ. ತ್ರಿನೇಶ್ ಅವರನ್ನು ಹೆಬ್ಬಾಲೆ ಗ್ರಾಮಸ್ಥರು ಸನ್ಮಾನಿಸಿ, ಗೌರವಿಸಿದರು. ಹೆಬ್ಬಾಲೆ ವಲಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಜಂಟಿಯಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಹೆಬ್ಬಾಲೆ ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಜಿ. ಲೋಕೇಶ್ ಅವರು ತ್ರಿನೇಶ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ಟಿ.ಜಿ. ಲೋಕೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮೂಲಕ ಸ್ಥಳೀಯ ಚುನಾವಣೆಯನ್ನು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸಲಹೆ ನೀಡಿದರು. ಕಾಂಗ್ರೆಸ್ ಮುಖಂಡ ಕೆ. ಸೂರಜ್ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ತ್ರಿನೇಶ್, ಪಕ್ಷವನ್ನು ಸಂಘಟಿಸುವ ಮೂಲಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭ ತೊರೆನೂರು ಬಸವೇಶ್ವರ ದೇವಾಲಯ ಸಮಿತಿ ಕಾರ್ಯಾಧ್ಯಕ್ಷ ಟಿ.ಜಿ. ಶಿವಣ್ಣ ವಕೀಲರಾದ ಎಚ್.ಟಿ. ನಿರಂಜನ್, ಎಚ್.ಜೆ. ಗಿರೀಶ್, ಉದ್ಯಮಿ ಕೆ.ಎಸ್. ರವಿ ಕೂಡಿಗೆ, ಗ್ರಾಮಸ್ಥರಾದ ಎಚ್.ಎಂ. ವಿಶ್ವನಾಥ್, ಎಚ್.ಕೆ. ಸುಭಾಷ್, ಅರುಣ್, ಹೆಚ್.ಬಿ. ತ್ರಿನೇಶ್ ಶಿವರಾಂ.ರಘು ಮತ್ತಿತರರು ಪಾಲ್ಗೊಂಡಿದ್ದರು.