ಗೋಣಿಕೊಪ್ಪಲು, ಆ. ೨೧: ಭಾರತ ರತ್ನ ದಿ. ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ಗೋಣಿಕೊಪ್ಪಲಿನಲ್ಲಿ ರಾಷ್ಟಿçÃಯ ಸದ್ಭಾವನಾ ದಿನಾಚರಣೆ. ಪ್ರಯುಕ್ತ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.
ಭಾರತದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ದಿ. ಡಿ. ದೇವರಾಜ ಅರಸು ಅವರ ಜನ್ಮದಿನವನ್ನು ಪೊನ್ನಂಪೇಟೆಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಮತ್ತು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು.
ಗೋಣಿಕೊಪ್ಪಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಲ್ಲಿನ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ಭಾರತದಲ್ಲಿ ಆಧುನಿಕ ಡಿಜಿಟಲ್ ಯುಗ ಮತ್ತು ದೂರ ಸಂಪರ್ಕ ಕ್ರಾಂತಿಗೆ ಭದ್ರ ಬುನಾದಿ ಹಾಕಿದ ಮಹಾನ್ ನಾಯಕ ರಾಜೀವ್ ಗಾಂಧಿ ಎಂದು ಪ್ರಚಾರ ಸಮಿತಿಯ ಅಧ್ಯಕ್ಷ ಟಾಟೂ ಮೊಣ್ಣಪ್ಪ ಹೇಳಿದರು.
ಗ್ರಾಮೀಣ ಭಾಗದ ಸಬಲೀಕರಣಕ್ಕಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಿದವರು ರಾಜೀವ್ ಗಾಂಧಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜೆ.ಕೆ. ಸೋಮಣ್ಣ ಅಭಿಪ್ರಾಯಪಟ್ಟರು.
ಭಾರತೀಯರೆಲ್ಲರೂ ಪರಸ್ಪರ ಸೌಹಾರ್ದತೆ, ಶಾಂತಿ ಮತ್ತು ರಾಷ್ಟಿçÃಯ ಭಾವೈಕ್ಯತೆಯಿಂದ ಬದುಕಬೇಕೆಂಬುದೇ ಈ ಸದ್ಭಾವನಾ ದಿನದ ಪ್ರಮುಖ ಸಂದೇಶವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಎನ್.ಎಸ್. ಕಂದಾ ದೇವಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ಪ್ರಮುಖರಾದ ಅಬ್ದುಲ್ ಸಮ್ಮದ್, ಮುತ್ತಣ್ಣ, ಮಲ್ಲಂಡ ಧ್ಯಾನ್ ದೇವಯ್ಯ, ಪ್ಯಾಟ್ರಿಕ್, ಅನ್ಸೀರ್, ನಿಖಿಲ್, ಶಾಹಿಲ್, ರಾಹಿಲ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.