ಕುಶಾಲನಗರ, ಆ. ೨೦: ವಾಹನ ನಿಯಮ ಉಲ್ಲಂಘಿಸಿ ಕಣ್ಣು ಕುಕ್ಕುವ ಬಣ್ಣಬಣ್ಣದ ದೀಪಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದ ಮಹೀಂದ್ರ ಥಾರ್ ವಾಹನವನ್ನು ಕುಶಾಲನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಮಹೀAದ್ರ ಥಾರ್ (ಕೆಎ-೫೩-ಎಂಎನ್-೯೭೬೨) ವಾಹನದಲ್ಲಿ ಕಣ್ಣು ಕುಕ್ಕುವ ಬಣ್ಣಬಣ್ಣದ ಲೈಟ್‌ಗಳನ್ನು ಅಳವಡಿಸಿಕೊಂಡು ಕುಶಾಲನಗರ ಪಟ್ಟಣದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಸಂಚಾರಿ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಬಳಿಕ ವಾಹನವನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.