ಮಡಿಕೇರಿ ಆ. ೨೦: ಪ್ರತಿಯೊಬ್ಬರು ಛಾಯಾಗ್ರಾಹಕರೇ ಆಗಿರುವ ಪ್ರಸ್ತುತ ಕಾಲ ಘಟ್ಟದಲ್ಲಿ, ತೆಗೆಯುವ ಫೋಟೋಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿ “ಮೌಲ್ಯ”ವನ್ನು ತುಂಬುವ ಪ್ರಯತ್ನ ಮಾಡಬೇಕಾಗಿದೆ ಎಂದು ಖ್ಯಾತ ಛಾಯಾಗ್ರಾಹಕರು, ಪಕ್ಷಿ ತಜ್ಞರು ಆದ ಡಾ.ಎಸ್.ವಿ.ನರಸಿಂಹನ್ ಕರೆ ನೀಡಿದರು.
ಕೊಡಗು ಪತ್ರಕರ್ತರ ಸಂಘ ಮತ್ತು ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಸಂತ ಅನ್ನಮ್ಮ ಪದವಿ ಕಾಲೇಜು ಸಭಾಂಗಣದಲ್ಲಿ ಆಯೋಜಿತ “ವಿಶ್ವ ಛಾಯಾಗ್ರಹಣ ದಿನಾಚರಣೆ-೨೦೨೬”ನ್ನು ಕ್ಯಾಮೆರಾದಿಂದ ಛಾಯಾಚಿತ್ರವನ್ನು ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಫಿಲ್ಮ್ ರೋಲ್‌ಗಳನ್ನು ಬಳಸಿ ಛಾಯಾಗ್ರಹಣ ಮಾಡುತ್ತಿದ್ದ ಹಳೆಯ ಕಾಲ ಘಟ್ಟದಲ್ಲಿ ಛಾಯಾಗ್ರಾಹಕ ಮತ್ತು ಪತ್ರಕರ್ತರು ಬೇರೆ ಬೇರೆಯಾಗಿ ಗುರುತಿಸಲ್ಪಡುತ್ತಿದ್ದರು. ಡಿಜಿಟಲ್ ಛಾಯಾಗ್ರಹಣ ಬಂದ ಬಳಿಕ ಒಟ್ಟು ಛಾಯಾಗ್ರಹಣದ ಆಯಾಮವೇ ಬದಲಾವಣೆಯನ್ನು ಕಂಡು ಕೊಂಡಿದೆ. ಪ್ರಸ್ತುತ ಅತ್ಯುನ್ನತ ತಂತ್ರಜ್ಞಾನದ ಮೊಬೈಲ್‌ಗಳ ಮೂಲಕ ಗುಣಮಟ್ಟದ ಛಾಯಾಗ್ರಹಣ ಸಾಧ್ಯವಾಗಿದೆ ಎಂದು ನರಸಿಂಹನ್ ತಿಳಿಸಿದರು.
ಛಾಯಾಗ್ರಹಣದತ್ತ ಆಸಕ್ತಾಗಿರುವವರು ಸೂಕ್ಷಾತಿಸೂಕ್ಷö್ಮವಾದ “ಮೈಕ್ರೋ ಫೋಟೋಗ್ರಫಿ”ಯತ್ತ ಆಸಕ್ತರಾಗುವಂತೆ ತಿಳಿಸಿದ ಅವರು, ಕೀಟಗಳು, ಚಿಟ್ಟೆಗಳು, ಕಪ್ಪೆ ಹೀಗೆ ನೂರಾರು ಬಗೆಯ ಸಣ್ಣ ಗಾತ್ರದ ಜೀವ ಜಗತ್ತೆ ಅತ್ಯಂತ ಅಚ್ಚರಿದಾಯಕವಾದದ್ದು. ಮೈಕ್ರೋ ಫೋಟೋಗ್ರಫಿಯ ಮೂಲಕ ಅತ್ಯಾಕರ್ಷಕವಾದ ಅಚ್ಚರಿಯ ಜೀವಜಗತ್ತನ್ನು ಕಾಣಲು ಸಾಧ್ಯವಿದೆ. ಛಾಯಾಗ್ರಹಣದತ್ತ ಆಸಕ್ತಿ ಉಳ್ಳವರಿಗೆ ಪ್ರಸ್ತುತ ಕ್ಯಾಮೆರಾಗಳೆ ಬೇಕೆಂದಿಲ್ಲ. ಮೊಬೈಲ್‌ಗಳ ಮೂಲಕವೆ ಸಾಧನೆ ಮಾಡಬಹುದು. ಈ ರೀತಿ ಛಾಯಾಗ್ರಹಣ ಮಾಡುವ ಸಂದರ್ಭ ಅದರಲ್ಲಿ ಮೌಲ್ಯವನ್ನು ತುಂಬುವ ಕೆಲಸವನ್ನು ಮಾಡುವಂತೆ ಡಾ. ನರಸಿಂಹನ್ ಮನವಿ ಮಾಡಿದರಲ್ಲದೆ, ತಾವು ತೆಗೆದ ಪೋಟೋಗಳಿಗೆ ಅಂದವಾದ ಅಡಿ ಬರಹವನ್ನು ಕನ್ನಡದಲ್ಲೆ ಬರೆಯುವಂತೆ ಮನವಿ ಮಾಡಿದ ಅವರು ಪ್ರಸ್ತುತ ಯಾರು ಬೇಕಾದರೂ ವೃತ್ತಿಪರರ ಬದಲಾಗಿ ಹವ್ಯಾಸಿ ಛಾಯಾಗ್ರಾಹಕರಾಗಿ ರೂಪುಗೊಳ್ಳುವ ಹೆಚ್ಚಿನ ಅವಕಾಶವಿದೆ ಎಂದು ತಿಳಿಸಿದರು.
ವೀರಾಜಪೇಟೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ.ಅಬ್ದುಲ್ ಸಲಾಂ ಮಾತನಾಡಿ, ಛಾಯಾಚಿತ್ರಗಳು ಸಮಾಜದ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಆಗು ಹೋಗುಗಳನ್ನು ತಿಳಿಸುವ ಪ್ರಭಾವಿ ಮಾಧ್ಯಮವೇ ಆಗಿದೆ. ದಿಡ್ಡಳ್ಳಿ ಹೋರಾಟದ ಸಂದರ್ಭ ಪ್ರಕಟವಾದ ಕೆಲ ಛಾಯಾಚಿತ್ರಗಳು ಅಲ್ಲಿನ ನಿರಾಶ್ರಿತರಿಗೆ ಸೂರು ಒದಗಿಸಿಕೊಡಲು ಸಹಕಾರಿಯಾಗಿತ್ತು ಎಂದು ತಿಳಿಸಿದರು.
ಮಾಜಿ ಯೋಧ ಎನ್.ಕೆ.ಸಲಾಂ ಮಾತನಾಡಿ, ಕಾರ್ಗಿಲ್ ಸೆಕ್ಟರ್‌ನಲ್ಲಿ ಯೋಧರಾಗಿ ಸೇರ್ಪಡೆಗೊಂಡ ಬಳಿಕ ಸೈನ್ಯದಲ್ಲಿ ಸಲ್ಲಿಸಿದ್ದ ಸೇವೆಯನ್ನು ಸ್ಮರಿಸಿ, ತಮ್ಮ ಸೇವಾವಧಿಯಲ್ಲಿ ಸೈನ್ಯಕ್ಕೆ ಸಂಬAಧಿಸಿದ ಕಾರ್ಯಕ್ರಮಗಳ ಛಾಯಾಗ್ರಹಣ ಮಾಡಿದ್ದೆ. ಅಲ್ಲಿ ಯಾವುದೇ ರೀ ಟೇಕ್‌ಗಳು ಇರಲಿಲ್ಲವೆಂದು ಅಂದಿನ ದಿನಗಳನ್ನು ಸ್ಮರಿಸಿಕೊಂಡರು. ಹಿರಿಯ ಪತ್ರಕರ್ತ ಮಂಡಿಬೆಲೆ ರಾಜಣ್ಣ ಮಾತನಾಡಿ, ಈ ಹಿಂದೆ ಪತ್ರಿಕೆಗಳಿಗೆ ಸುದ್ದಿ ಮಾಡುವ ಸಂದರ್ಭ ಛಾಯಾಗ್ರಾಹಕರ ಅವಶ್ಯಕತೆ ಹೆಚ್ಚಾಗಿ ಕಂಡು ಬರುತಿತ್ತು. ಪ್ರಸ್ತುತ ಕಾಲ ಘಟ್ಟದಲ್ಲಿ ಮೊಬೈಲ್ ಇರುವವರೆಲ್ಲರೂ ಪತ್ರಕರ್ತರಾಗುತ್ತಿದ್ದಾ ಎಂದು ಅಭಿಪ್ರಾಯಪಟ್ಟರಲ್ಲದೇ, ವಿದ್ಯಾರ್ಥಿಗಳು ಹವ್ಯಾಸಿ ಪತ್ರಕರ್ತರಾಗಿ ಗುರುತಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರಾದ ರೆ.ಫಾ. ಮದಲೈಮುತ್ತು ಮಾತನಾಡಿ, ೧೮೩೯ ರ ಆ.೧೯ ರಿಂದ ಮೊಟ್ಟ ಮೊದಲ ಬಾರಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆರಂಭಗೊAಡಿತು. ಇಂದಿನ ದಿನಮಾನಗಳಲ್ಲಿ ಕೃತಕ ಬುದ್ಧಿ ಮತ್ತೆ(ಎಐ) ಎಲ್ಲಾ ವಿಚಾರಗಳಲ್ಲು ಹಾಸು ಹೊಕ್ಕಾಗುತ್ತಿದೆ. ಹೀಗಿದ್ದೂ ಮನುಷ್ಯನ ಕ್ರಿಯಾಶೀಲತೆಗೆ ಎಐ ಸರಿಸಾಟಿಯಾಗಲಾರದೆಂದು ತಿಳಿಸಿ, ಮೌಲ್ಯಯುತವಾದ ಚಿತ್ರ ಮತ್ತು ಬರಹಗಳ ಮೂಲಕ ಉತ್ತಮ ಸಮಾಜ ಕಟ್ಟುವ ಕಾರ್ಯ ಎಲ್ಲರಿಂದ ನಡೆÀಯುವಂತಾಗಲೆAದು ಹಾರೈಸಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಸಂಘದಿAದ ಮೂರನೇ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತಿದೆ. ಈ ಹಿಂದೆ ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಆಚರಿಸಲಾಗಿತ್ತು. ಇಂದಿನ ದಿನಗಳಲ್ಲಿ ಪತ್ರಕರ್ತರೆಲ್ಲರು ಛಾಯಾಗ್ರಾಹಕರೆ ಆಗಿದ್ದಾರೆ. ಪತ್ರಿಕೆಗಳಲ್ಲಿ ಪ್ರಕÀಟವಾಗುವ ಯಾವುದೇ ಸುದ್ದಿ ಅದಕ್ಕೆ ಪೂರಕವಾದ ಛಾಯಾಚಿತ್ರದ ಮೂಲಕ ಮತ್ತಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಧೋಷ್ ಪೂವಯ್ಯ ಮಾತನಾಡಿ, ಬದುಕಿನ ಸುಂದರ ಕ್ಷಣಗಳನ್ನು ಛಾಯಾಚಿತ್ರಗಳು ಸದಾ ಜೀವಂತವಾಗಿರಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಪ್ರದಾನ
ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ತಮ್ಮ ಪುತ್ರಿ ಡಾ. ಅನುಶ್ರೀ ಅವರ “ಹ್ಯಾಪಿಟೀತ್ ಡೆಂಟಲ್ ಕ್ಲಿನಿಕ್” ಹೆಸರಿನಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳನ್ನು ಒಳಗೊಂಡ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಯನ್ನು ಶಕ್ತಿಯ ಉಪ ಸಂಪಾದಕ ಉಜ್ವಲ್ ರಂಜಿತ್ ಅವರಿಗೆ, ಸಮಾಜ ಸೇವಕ ಮಂಡಿಬೆಲೆ ರಾಜಣ್ಣ ಅವರು ತಮ್ಮ ಪೋಷಕರಾದ ಮಂಡಿಬೆಲೆ ದ್ಯಾವಮ್ಮ ಮತ್ತು ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ, ಆದಿವಾಸಿಗಳ ಬದುಕಿಗೆ ಸಂಬAಧಿಸಿದ ಮಾನವೀಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯ ಎಂ.ಎ. ಸುಕುಮಾರ್ ಅವರಿಗೆ, ಮಳೆಗಾಲದ ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಅತ್ಯುತ್ತಮ ವೀಡಿಯೋಗ್ರಫಿಗಾಗಿ ನೀಡಲಾಗುವ ಪ್ರಶಸಿಯನ್ನು ಕೊಡಗು ಚಾನೆಲ್‌ನ ಕ್ಯಾಮೆರಾಮನ್ ಹನೀಫ್ ಅವರಿಗೆ, ಗುಂಡುಕುಟ್ಟಿ ಎಸ್ಟೇಟ್ ಮಾಲೀಕ ಜಿ.ಎಂ.ಮಹೇAದ್ರ ಅವರು ತಮ್ಮ ತಂದೆ ಜಿ.ಎಂ. ಮೋಹನ್ ಹೆಸರಿನಲ್ಲಿ ನೀಡುವ ಕಾಫಿ ಉದ್ಯಮದ ಕುರಿತಾದ ವರದಿ ಪ್ರಶಸ್ತಿಯನ್ನು ವಿನೋದ್ ಮೂಡಗದ್ದೆ ಅವರಿಗೆ ಪ್ರದಾನ ಮಾಡಲಾಯಿತು.
ಇದೇ ಸಂದರ್ಭ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ತನ್ನ ೪೦ನೇ ಛಾಯಾಚಿತ್ರ ಪ್ರದರ್ಶನ ನಡೆಸಿದ ಛಾಯಾಗ್ರಾಹಕ ವಿಶ್ವ ಗುಡ್ಡೆಮನೆ ಹಾಗೂ ಡಿಜಿಟಲ್ ಫೋಟೋ ಮೂಲಕ ವನ್ಯಜೀವಿಗಳ ವಿಶೇಷವಾಗಿ ಚಿಟ್ಟೆಗಳ ಪೋಟೋ ಪ್ರದರ್ಶಿಸಿದ ವೀರಾಜಪೇಟೆಯ ಹವ್ಯಾಸಿ ಛಾಯಾಗ್ರಾಹಕಿ ಮುಕ್ಕಾಟಿರ ಡೀನಾ ಪೂವಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ರೆ.ಫಾ. ಮದಲೈ ಮುತ್ತು, ಮಂಡಿಬೆಲೆ ರಾಜಣ್ಣ, ಅಬ್ದುಲ್ ಸಲಾಂ, ಎನ್.ಕೆ.ಸಲಾಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್, ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಉಪಸ್ಥಿತರಿದ್ದರು.
ವೀರಾಜಪೇಟೆ ತಾಲೂಕು ಸಂಘದ ಕಾರ್ಯದರ್ಶಿ ಉಷಾ ಪ್ರೀತಮ್ ಕಾರ್ಯಕ್ರಮ ನಿರೂಪಿಸಿದರು. ಅನಿಲ್ ಎಚ್.ಟಿ. ಸ್ವಾಗತಿಸಿದರು. ಸನ್ಮಾನಿತರನ್ನು ಅನುಷಾ, ಟೋಮಿ ಥೋಮಸ್, ರೆಹಮಾನ್, ನವೀನ್ ಚಿಣ್ಣಪ್ಪ, ಶಶಿ ಮಗ್ಗುಲ, ಕೆ.ಎಸ್.ಅನಿಲ್ ಕುಮಾರ್ ಪರಿಚಯಿಸಿದರು. ಉಪನ್ಯಾಸಕ ಶಾಂತಿ ಭೂಷಣ್ ವಂದಿಸಿದರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್, ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜ್ ಕುಶಾಲಪ್ಪ, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಪಾಲ್ಗೊಂಡಿದ್ದರು