ಮಡಿಕೇರಿ, ಆ. ೨೦: ಭಾಗಮಂಡಲ ಸಮೀಪ ಅಯ್ಯಂಗೇರಿಯ ಗೌಡ ಯುವ ಒಕ್ಕೂಟದ ವತಿಯಿಂದ ತಾ. ೨೯ ಮತ್ತು ತಾ. ೩೦ ರಂದು ಭಾಗಮಂಡಲದ ಕುದುಕುಳಿ ಕುಶಾಲಪ್ಪ ಅವರ ಗದ್ದೆಯಲ್ಲಿ ಪ್ರಥಮ ವÀರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಗೌಡ ಯುವ ಒಕ್ಕೂಟದ ಅಧ್ಯಕ್ಷ ಭರತ್ ಕಾವೇರಿಮನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾ. ೨೯ ರಂದು ಕೆಸರುಗದ್ದೆ ಕ್ರಿಕೆಟ್ ಪಂದ್ಯಾವಳಿ ಆಯೋಜಿತವಾಗಿದ್ದು, ಈಗಾಗÀಲೇ ೨೪ ತಂಡಗಳು ನೋಂದಣಿಯಾಗಿವೆ. ೩ ಓವರ್‌ಗಳಿಗೆ ಸೀಮಿತವಾದ ಈ ಪಂದ್ಯಾವಳಿಯನ್ನು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಪಂದ್ಯಾವಳಿ ವಿಜೇತ ತಂಡಕ್ಕೆ ರೂ. ೧೦,೦೦೦, ದ್ವಿತೀಯ ರೂ. ೮,೦೦೦ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ಬಹುಮಾನವಾಗಿ ವಿತರಿಸಲಾಗುತ್ತದೆ.

ತಾ. ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಮಹಿಳೆಯರ ವಿಭಾಗದ ಥ್ರೋಬಾಲ್ ಪಂದ್ಯಾವಳಿ ನಡೆಯಲಿದ್ದು, ಇದÀನ್ನು ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಉದ್ಘಾಟಿಸಲಿದ್ದಾರೆ. ಪಂದ್ಯಾವಳಿ ವಿಜೇತ ತಂಡಕ್ಕೆ ರೂ. ೧೦,೦೦೦, ದ್ವಿತೀಯ ರೂ. ೮,೦೦೦ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ ಎಂದರು.

ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾವಳಿಯನ್ನು ಒಕ್ಕೂಟದ ಖಜಾಂಚಿ ಕಾವೇರಿಮನೆ ಸುಗು ಅವರು ಉದ್ಘಾಟಿಸಲಿದ್ದು, ವಿಜೇತ ತಂಡಗಳಿಗೆ ಬಹುಮಾನ ನೀಡಲಾಗುತ್ತದೆ. ಮಹಿಳೆಯರು ಮತ್ತು ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗದ ವಿಜೇತ ತಂಡಗಳಿಗೆ ೧೫ ಸಾವಿರ ನಗದು, ದ್ವ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೧೦ ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪಂದ್ಯಾವಳಿಯನ್ನು ಒಕ್ಕೂಟದ ಕ್ರೀಡಾಧ್ಯಕ್ಷರಾದ ಬಾರಿಕೆ ಅರುಣ್ ಉದ್ಘಾಟಿಸಲಿದ್ದಾರೆ ಎಂದರು.

ಕೆಸರು ಗದ್ದೆ ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್‌ಕೆಜಿ-ಯುಕೆಜಿ ಮತ್ತು ೧ನೇ ತರಗತಿ ವಿಭಾಗ, ೨ ರಿಂದ ೪ನೇ ತರಗತಿ ಮಕ್ಕಳ ವಿಭಾಗ, ೫ ರಿಂದ ೭ನೇ ತರಗತಿವರೆಗಿನ ಮಕ್ಕಳ ವಿಭಾಗ, ಪ್ರೌಢಶಾಲಾ ವಿಭಾಗ, ಪದವಿ ಮತ್ತು ಪದವಿಪೂರ್ವ ವಿಭಾಗ, ೩೦ ವರ್ಷ ಮೇಲ್ಪಟ್ಟವರ ವಿಭಾಗ, ೫೦ ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ೮೪೩೧೫೧೫೪೦೪ ಸಂಪರ್ಕಿಸಬಹುದು. ಸಮಾರೋಪ ಸಮಾರಂಭ ಸಂಜೆ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಭರತ್ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಬಾರಿಕೆ ರತನ್, ಖಜಾಂಚಿ ದೀಪಕ್ ಬಾರಿಕೆ, ಉಪಾಧ್ಯಕ್ಷ ಬಾರಿಕೆ ಲೋಕೇಶ್, ಕ್ರೀಡಾಧ್ಯಕ್ಷ ಬಾರಿಕೆ ಅರುಣ್ ಹಾಗೂ ಸಹ ಖಜಾಂಚಿ ಕಾವೇರಿಮನೆ ಸುಗು ಉಪಸ್ಥಿತರಿದ್ದರು.