ಸಿದ್ದಾಪುರ, ಆ. ೨೦: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು, ಹಾಲುಗುಂದ, ಬೈರಂಬಾಡ, ಕಣ್ಣಂಗಾಲ ವ್ಯಾಪ್ತಿಯ ಯಡೂರು ಅಮ್ಮತ್ತಿ ,ಹಚ್ಚಿನಾಡು ಪಲ್ಲಕೆರೆ, ಗುಹ್ಯ, ಇಂಜಿಲಗೆರೆ ಪುಲಿಯೇರಿ, ಕರಡಿಗೋಡು ಭಾಗದಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿರುವ ಸಲಗವನ್ನು ಸೆರೆ ಹಿಡಿಯುವ ಕಾರ್ಯಾಚರಣೆಯು ತಾ. ೨೧ ರಂದು (ಇಂದು) ಬೆಳಿಗ್ಗೆ ೮ ರಿಂದ ರಾತ್ರಿಯವರೆಗೆ ನಡೆಯಲಿದೆ.
ಕಾರ್ಯಾಚರಣೆ ಸಂದರ್ಭ ಗ್ರಾಮಗಳ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳು ಮತ್ತು ವಾಹನ ಚಾಲಕರು ಹಾಗೂ ಗ್ರಾಮಸ್ಥರು, ರೈತರು ಎಚ್ಚರಿಕೆ ವಹಿಸಬೇಕು, ಅನಗತ್ಯವಾಗಿ ಓಡಾಡಬಾರದು, ಪಟಾಕಿ ಸಿಡಿ¸ಬಾರದು, ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತಾ ಚವ್ಹಾಣ್ ಮನವಿ ಮಾಡಿದ್ದಾರೆ.