ಸೋಮವಾರಪೇಟೆ, ಆ. ೧೯: ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಶ್ರೀ ಭುವನೇಶ್ವರಿ ಸನ್ನಿಧಿಯಲ್ಲಿ ಕಳೆದ ಒಂದು ತಿಂಗಳಿನಿAದ ನಡೆದ ಆಟಿ ಮಾಸದ ವಿಶೇಷ ಪೂಜೆ ವಿವಿಧ ಹೋಮ ಹವನದೊಂದಿಗೆ ಸಂಪನ್ನಗೊAಡಿತು.

ದೇವಿ ಸನ್ನಿಧಿಯಲ್ಲಿ ಮನೀಶ್ ತಂತ್ರಿಗಳ ನೇತೃತ್ವದಲ್ಲಿ, ಅರ್ಚಕರಾದ ಉಣ್ಣಿಕೃಷ್ಣನ್, ವೆಂಕಟೇಶ್ ಅವರು ಗೌರಿ ಹೋಮ ಮತ್ತು ಪೂಜಾ ಕಾರ್ಯ ನಡೆಸಿದರು.

ಅಟಿ ಮಾಸದ ಪ್ರಯುಕ್ತ ವಿಶೇಷ ಗಣಪತಿ ಹೋಮದೊಂದಿಗೆ ಪೂಜೆ ಪ್ರಾರಂಭಗೂAಡಿದ್ದು, ಪ್ರತಿದಿನ ಭಗವತಿ ಸೇವೆ-ದುರ್ಗಾದೀಪ ನಮಸ್ಕಾರ ಪೂಜೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ವಿನೋದ್ ಮತ್ತು ಪದಾಧಿಕಾರಿಗಳು, ಭಕ್ತಾದಿಗಳು ಭಾಗಿಯಾಗಿದ್ದರು.