ಕೊಡಗಿನ ಮಡಿಕೇರಿ ದಸರಾ ಎಷ್ಟು ವಿಶ್ವಪ್ರಸಿದ್ಧವೋ, ವೀರಾಜಪೇಟೆಯ ಗಣೇಶ ಚತುರ್ಥಿ ಆಚರಣೆಯೂ ಅಷ್ಟೇ ವೈಭವಯುತ. ವೀರಾಜಪೇಟೆಯ ಹೃದಯಭಾಗದಲ್ಲಿ, ಗಡಿಯಾರ ಕಂಬ ಸಮೀಪದಲ್ಲಿರುವ ಶ್ರೀ ಗಣಪತಿ ದೇವಾಲಯವು ಜಿಲ್ಲೆಯ ಪ್ರಮುಖ ಧಾರ್ಮಿಕ ಮತ್ತು ಶ್ರದ್ಧಾ ಕೇಂದ್ರವಾಗಿ ಕಂಗೊಳಿಸುತ್ತಿದೆ.
ವೀರಾಜಪೇಟೆ ಪಟ್ಟಣವನ್ನು ಕ್ರಿ.ಶ. ೧೭೯೨ ರಲ್ಲಿ ಕೊಡಗಿನ ರಾಜ ದೊಡ್ಡ ವೀರರಾಜೇಂದ್ರ ಅವರು ಸ್ಥಾಪಿಸಿದರು. ಇತಿಹಾಸದ ಪ್ರಕಾರ, ೧೮೫೫ ಕ್ಕಿಂತಲೂ ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ತಂಜಾವೂರಿನಿAದ ವ್ಯಾಪಾರಕ್ಕಾಗಿ ಬಂದಿದ್ದ ತಿರುಚಾನಪಳ್ಳಿ ರಾಮಸ್ವಾಮಿ ಪಿಳ್ಳೆöÊ ಮತ್ತು ನಾಗಮ್ಮ ದಂಪತಿ ಆದ ದೈವಪ್ರೇರಣೆಯಿಂದ ಈ ಸ್ಥಳದಲ್ಲಿ ಗಣಪತಿ ಗುಡಿಯನ್ನು ಸ್ಥಾಪಿಸಲಾಯಿತು.
ಸುಮಾರು ೧೭೦ ರಿಂದ ೨೦೦ ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ಪಿಳ್ಳೆöÊ ಕುಟುಂಬದವರು ಮುನ್ನುಡಿ ಬರೆದರು. ಅಂದಿನಿAದ ಇಂದಿನವರೆಗೆ ಸ್ಥಳೀಯ ಭಕ್ತರು ಹಾಗೂ ಧಾರ್ಮಿಕ ಸಮಿತಿಯ ಸಹಕಾರದಿಂದ ಈ ದೇವಸ್ಥಾನವು ನಿರಂತರವಾಗಿ ಬೆಳೆದುಬಂದಿದೆ. ಆರಂಭದಲ್ಲಿ ಸಣ್ಣ ಗುಡಿಯಾಗಿದ್ದ ಈ ದೇವಾಲಯವು ಹಲವು ಜೀರ್ಣೋದ್ಧಾರ ಕಾರ್ಯಗಳನ್ನು ಕಂಡಿದೆ.
೨೦ನೇ ಶತಮಾನದ ಆರಂಭದಲ್ಲಿ ಟಿ. ರಾಮಸ್ವಾಮಿ ಪಿಳ್ಳೆöÊ ಮುಂದೆ ಅವರ ವಂಶಸ್ಥರಾದ ಟಿ. ತಿರುವೇಂಗಡA ಪಿಳ್ಳೆöÊ, ಟಿ.ಬಿ. ರಾಮಸ್ವಾಮಿ ಪಿಳ್ಳೆöÊ ಹಾಗೂ ಟಿ.ಬಿ. ಬಾಲಕೃಷ್ಣ ಪಿಳ್ಳೆöÊ ಅವರು ಆಡಳಿತ ನಡೆಸಿದ್ದು, ೧೯೮೧ ರಲ್ಲಿ ಸಾರ್ವಜನಿಕ ಸಮಿತಿಯನ್ನು ರಚಿಸಲಾಯಿತು. ೧೯೯೬-೨೦೦೨ರವರೆಗೆ ಸಮಿತಿಯ ನೇತೃತ್ವದಲ್ಲಿ ಕಲಾಮಂಟಪ, ಸಭಾ ಭವನ, ನವಗ್ರಹ ದೇವತೆಗಳ ಸ್ಥಾಪನೆ ಹಾಗೂ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯಗಳು ನೆರವೇರಿದವು.
೨೦೧೦-೨೦೧೨ ರಲ್ಲಿ ೫೪ ಅಡಿ ಎತ್ತರದ ಚೋಳ ಶೈಲಿಯ ಕಳಶಾಲಂಕೃತ ರಾಜಗೋಪುರ ಹಾಗೂ ೨೬ ಅಡಿ ಎತ್ತರದ ಎರಡು ಉಪ ಗೋಪುರಗಳನ್ನು ನಿರ್ಮಿಸಲಾಯಿತು.
ವೀರಾಜಪೇಟೆ ಗಣಪತಿ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ವಾರ್ಷಿಕ ಗಣೇಶ ಚತುರ್ಥಿ. ಇಲ್ಲಿ ೧೧ ದಿನಗಳ ಕಾಲ ಅತ್ಯಂತ ವೈಭವದಿಂದ ಉತ್ಸವಗಳನ್ನು ಆಚರಿಸಲಾಗುತ್ತದೆ. ಗಣೇಶೋತ್ಸವದ ಆಕರ್ಷಣೆಯೆಂದರೆ ರಾತ್ರಿ ನಡೆಯುವ ವಿಸರ್ಜನಾ ಮೆರವಣಿಗೆ ಸಂದರ್ಭ ಗಣೇಶನ ಮಂಟಪವನ್ನು ಸಂಪೂರ್ಣವಾಗಿ ಹೂವಿನಿಂದಲೇ ಅಲಂಕೃತ ಮಾಡಲಾಗಿರುತ್ತದೆ. ಹೂವಿನಿಂದ ವಿವಿಧ ಕಲಾಕೃತಿಗಳನ್ನು ಮಾಡಲಾಗುತ್ತದೆ. ಅಲಂಕರಿಸಿದ ಭವ್ಯ ರಥಗಳಲ್ಲಿ ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಇಡೀ ರಾತ್ರಿ ನಡೆಯುವ ಈ ಮೆರವಣಿಗೆಯು ಮರುದಿನ ಬೆಳಿಗ್ಗೆ ಭಾವನಾತ್ಮಕ ವಾತಾವರಣದಲ್ಲಿ ಗೌರಿಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.
ಪ್ರಸ್ತುತ ಹಿರಿಯ ವಕೀಲರಾದ ಎಸ್.ಆರ್. ಜಗದೀಶ್ ಅವರು ಅಧ್ಯಕ್ಷರಾಗಿ, ಮಾಳೇಟಿರ ಕಾವೇರಪ್ಪ ಅವರು ಕಾರ್ಯದರ್ಶಿಯಾಗಿ ಹಾಗೂ ನಿರ್ದೇಶಕರಾಗಿ ವಿ.ವಿ. ಜಯರಾಮ್, ಪಟ್ಟಡ ಮೋಹನ್ ಸೇರಿದಂತೆ ಹಲವು ಗಣ್ಯರು ದೇವಾಲಯದ ಸೇವೆಯಲ್ಲಿ ನಿರತರಾಗಿದ್ದಾರೆ.
ಕೊನೆಮಾತು : ವೀರಾಜಪೇಟೆಯ ಶ್ರೀ ಗಣಪತಿ ದೇವಾಲಯ ಹಾಗೂ ಇಲ್ಲಿನ ಗಣೇಶೋತ್ಸವವು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ. ಇದು ಜಾತಿ-ಮತಗಳ ಬೇಧವಿಲ್ಲದೆ ಇಡೀ ಸಮಾಜವನ್ನು ಒಂದಾಗಿಸುವ ಸಾಂಸ್ಕöÈತಿಕ ಕೊಂಡಿ ಹಾಗೂ ಕೊಡಗಿನ ಭವ್ಯ ಪರಂಪರೆಯ ಸಂಕೇತವಾಗಿದೆ.
-ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧