ಮಡಿಕೇರಿ, ಆ. ೧೯: ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ನಮ್ಮ ಸಂವಿಧಾನದ ವಿಧಿ ೩೭೧, ೫ ಮತ್ತು ೬ರ ಅಡಿಯಲ್ಲಿ ಸ್ವಯಂ ಆಡಳಿತ, ವಿಶ್ವಸಂಸ್ಥೆಯ ಸನ್ನದು ಮತ್ತು ಸಂವಿಧಾನದ ಅಡಿಯಲ್ಲಿ ಆದಿಮಸಂಜಾತ ಸಮುದಾಯವಾಗಿ ಕೊಡವ ಜನಾಂಗೀಯತೆಗೆ ಸಾಂವಿಧಾನಿಕ ರಕ್ಷಣೆ ಹಾಗೂ ವಿಶೇಷ ಗುರುತಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊAಡು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಜನಸಂಪರ್ಕ ಅಭಿಯಾನವನ್ನು ಬಿರುನಾಣಿಯಿಂದ ಆರಂಭಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಯೋಜಿಸಿರುವ ಅಭಿಯಾನದ ಭಾಗವಾಗಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ ಮಾತನಾಡಿದ ಎನ್.ಯು. ನಾಚಪ್ಪ, ಆದಿಮಸಂಜಾತ ಕೊಡವರು ಪ್ರತ್ಯೇಕ ಅನಿಮಿಸ್ಟಿಕ್ ನಂಬುಗೆಯ ಜನರೆಂದು ಸಂವಿಧಾನದಡಿಯಲ್ಲಿ ಗುರುತಿಸುವ ಮೂಲಕ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸ್ವಯಂ ಶಾಸನದ ಜನ್ಮ ಭೂಮಿಯಾಗಿ ಭದ್ರತೆ ದೊರೆತಲ್ಲಿ ಮಾತ್ರ ಕೊಡವ ನೆಲ, ಜಲ, ಸಂಸೃತಿ, ಪರಂಪರೆ, ಪರಿಸರ, ಜೀವವೈವಿಧ್ಯ ರಕ್ಷಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ನಮ್ಮ ಅಧ್ಯಾತ್ಮಿಕ ನೆಲೆಗಳಾದ ಮಂದ್, ಕೊಡವರ ವಿಶಿಷ್ಟ ವಂಶಾವಳಿ, ಸಾಂಪ್ರದಾಯಿಕ ನೆಲೆಯನ್ನು ಅನಾವರಣ ಮಾಡುವುದ ರೊಂದಿಗೆ ಮುಂಬರುವ ೨೦೨೭ರ ರಾಷ್ಟಿçÃಯ ಜನಗಣತಿ ಯಲ್ಲಿ, ಕೊಡವರು ಪ್ರತ್ಯೇಕ ಅಪರೂಪದ ಜನಾಂಗವೆAದು ದಾಖಲೀಕರಣ ಮಾಡಬೇಕು ಸೇರಿದಂತೆ ಸಿ.ಎನ್.ಸಿಯ ಹಲವು ಬೇಡಿಕೆಗಳ ಬಗ್ಗೆ ನಾಚಪ್ಪ ಪ್ರಸ್ತಾಪಿಸಿ ಈಡೇರಿಕೆಗೆ ಆಗ್ರಹಿಸಿದರು.
ಕಾಳಿಮಾಡ ಸವಿತಾ, ಅಣ್ಣಿರ ಸರಸು, ಕಾಳಿಮಾಡ ಪವಿತಾ, ಕಾಳಿಮಾಡ ಪೊನ್ನಮ್ಮ, ಕಾಳಿಮಾಡ ಶೆರಿ, ಬಲ್ಯಮೀದೇರಿರ ಸರಸ್ವತಿ, ಬೊಟ್ಟಂಗಡ ಗಿರೀಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಣ್ಣಿರ ಧನು ಪೂಣಚ್ಚ, ಅಣ್ಣಳಮಾಡ ಲಾಲ ಅಪ್ಪಣ್ಣ, ಕುಪ್ಪಣಮಾಡ ಜೀವನ್, ಕೀಕಣಮಡ ಮನು ಕಾರ್ಯಪ್ಪ, ನೆಲ್ಲಿರ ರಘು ನಂದ, ಕಳಕಂಡ ಚೇತು, ನೆಲ್ಲಿರ ಸೋಮಣ್ಣ, ಅಣ್ಣಳಮಾಡ ರಂಜನ್, ಕೀಕಣಮಡ ಉದಯ, ಅಣ್ಣಳಮಾಡ ಬಿದ್ದಪ್ಪ, ಅಣ್ಣಳಮಾಡ ಜಿಮ್ಮಿ, ಕರ್ತಮಾಡ ರಸ್ಸು, ಚೊಟ್ಟಂಗಡ ವಿಜು, ಕಳಕಂಡ ವಾಸು, ಅಣ್ಣಳಮಾಡ ಅಶೋಕ್, ಚಂಗಣಮಾಡ ನಾಣಿ, ಕಾಳಿಮಾಡ ಬೋಪಣ್ಣ, ಕುಪ್ಪಣಮಾಡ ಅರುಣ್, ಚೊಟ್ಟಂಗಡ ಅರುಣ್, ಚೊಟ್ಟಂಗಡ ಪೂವಯ್ಯ, ಕಾಳಿಮಾಡ ಸೋಮಯ್ಯ, ಕಳಕಂಡ ಪ್ರವೀ, ಬೊಟ್ಟಂಗಡ ಕಾರ್ಯಪ್ಪ, ಬೊಟ್ಟಂಗಡ ರಂಜನ್, ಆಲೆಮಾಡ ಗಗನ್, ಕಾಳಿಮಾಡ ಸಂತೋಷ್, ಕೀಕಣಮಡ ಹರೀಶ್, ಗುಡ್ಡಮಾಡ ಮಂಜು, ಕಳಕಂಡ ಪ್ರಧಾನ್, ಕರ್ತಮಾಡ ವಿಕಾಶ್, ಕುಪ್ಪಣಮಾಡ ಪ್ರೀತಮ್, ಕಾಳಿಮಾಡ ಪವನ್, ಬೊಟ್ಟಂಗಡ ರಂಜಿ, ಬೊಟ್ಟಂಗಡ ನಂಜಪ್ಪ, ಪಾಲೇಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ, ಬೊಟ್ಟಂಗಡ ವಿಜಯ, ಕಳಕಂಡ ಬೊಳ್ಳಿಯಪ್ಪ, ಕರ್ತಮಾಡ ನಂದ, ಕರ್ತಮಾಡ ಸುಗುಣ, ಅಣ್ಣಿರ ಪ್ರಕಾಶ್, ಅಮ್ಮತಿರ ಗಣೇಶ್, ಮೀದೇರಿರ ಕಾವೇರಪ್ಪ, ಅಣ್ಣಿರ ಸದಾ, ಕುಪ್ಪಣಮಾಡ ಸಂತೋಷ್, ಚೊಟ್ಟಂಗಡ ಸೋಮಣ್ಣ, ಬೊಳ್ಳೆರ ಕುಮಾರ್ ಪಾಲ್ಗೊಂಡಿದ್ದರು.