ಚೆಯ್ಯಂಡಾಣೆ, ಆ. ೧೮: ಸಮಸ್ತ ಶತಮಾನೋತ್ಸವದ ಆಚರಣೆಯ ಅಂಗವಾಗಿ ಮುಅಲ್ಲಿಂಗಳಿಗೆ ನಿರ್ಮಿಸಿಕೊಡಲಾಗುತ್ತಿರುವ ಮುಅಲ್ಲಿಮ್ ಭವನ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಗೆ ಮಂಜೂರಾದ ನಾಲ್ಕು ಮನೆಗಳಲ್ಲಿ ನಾಲ್ಕನೇ ಮನೆಯ ಶಂಕುಸ್ಥಾಪನಾ ಕಾರ್ಯಕ್ರಮ ಕೊಳಕೇರಿಯಲ್ಲಿ ಜರುಗಿತು.
ದಾರುಲ್ ಇಸ್ಲಾಂ ಮದ್ರಸ ಮುಅಲ್ಲಿಂಮರಾದ ಹಮೀದ್ ಮುಸ್ಲಿಯಾರ್ ಅವರಿಗೆ ಲಭಿಸಿದ ಈ ನೂತನ ಮನೆಯ ನಿರ್ಮಾಣ ಕಾರ್ಯಕ್ಕೆ ಎಸ್‌ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಳರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಕೊಡಗು ಜಿಲ್ಲಾ ಅಧ್ಯಕ್ಷ ಅಬ್ದುಲ್ಲಾ ಸಖಾಫಿ ಕೊಳಕೇರಿ ಹಾಗೂ ಇತರ ಸಾಂಘಿಕ ಮುಖಂಡರು ಮತ್ತು ಜಮಾಅತ್ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.