ಮಡಿಕೇರಿ, ಆ. ೧೯: ರಾಜ್ಯಸಭೆಯ ವಿಪಕ್ಷ ನಾಯಕ, ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಜಾಗವನ್ನು ಶುದ್ಧೀಕರಿಸುವುದಾಗಿ ಹೋಮ-ಹವನ ನಡೆಸಿರುವುದು ಖಂಡನೀಯ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಷ್ಟçಪತಿಗೆ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಹಿಂದೂ ಸಂಘಟನೆ ಮಾಡಿರುವ ಕೆಲಸ ರಾಷ್ಟçವಿರೋಧಿಯಾಗಿದ್ದು, ಇದೊಂದು ಅಸ್ಪೃಶ್ಯತಾಚರಣೆಯಾಗಿದೆ ಎಂದು ದೂರಿರುವ ದಸಂಸ ಪ್ರಮುಖರು ಈ ಕುರಿತು ಕಾನೂನಾತ್ಮಕ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭ ದಸಂಸ ಸಂಯೋಜಕ ಎಂ.ಎನ್. ರಾಜಪ್ಪ, ರಾಜಶೇಖರ್, ಪ್ರಮುಖರಾದ ಎಂ.ಇ. ಪೊನ್ನಪ್ಪ, ಚಂದ್ರಶೇಖರ್, ಕಿರಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.