ಗೋಣಿಕೊಪ್ಪಲು, ಆ. ೧೯: ಸಿಐಎಸ್‌ಸಿಇ ೨೦೨೬ರ ಕರ್ನಾಟಕ ಮತ್ತು ಗೋವಾ ವಲಯದ ಪ್ರಾದೇಶಿಕ ಹಾಕಿ ಪಂದ್ಯಾವಳಿ ಗೋಣಿಕೊಪ್ಪಲುವಿನ ಕಾಲ್ಸ್ ವಿದ್ಯಾಸಂಸ್ಥೆಯ ಕರುಂಬಯ್ಯಾಸ್ ಅಕಾಡೆಮಿ ಫಾರ್ ಲರ್ನಿಂಗ್ ಆ್ಯಂಡ್ ಸ್ಪೋರ್ಟ್ಸ್ನ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಹಾಕಿ ಟರ್ಫ್ನಲ್ಲಿ ಮುಕ್ತಾಯಗೊಂಡಿತು. ಕಾಲ್ಸ್ ವಿದ್ಯಾಸಂಸ್ಥೆ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ೧೪, ೧೭ ಹಾಗೂ ೧೯ ವರ್ಷದೊಳಗಿನ ವಿಭಾಗಗಳಲ್ಲಿ ಒಟ್ಟು ೧೯ ಬಾಲಕ ಹಾಗೂ ಬಾಲಕಿಯರ ತಂಡಗಳು ಪಾಲ್ಗೊಂಡಿದ್ದವು. ೮೦೦ಕ್ಕೂ ಅಧಿಕ ಪ್ರತಿಭಾವಂತ ಹಾಕಿ ಪಟುಗಳು ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸಿದರು.

೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕ್ಯಾಲ್ಸ್ ಶಾಲೆತಂಡವು ಬೆಂಗಳೂರಿನ ಸೇಂಟ್ ಜೋಸೆಫ್ ತಂಡವನ್ನು ೫-೧ ಗೋಲುಗಳ ಅಂತರದಿAದ ಮಣಿಸಿ ವಿಜೇತವಾಯಿತು.

ಬಾಲಕಿಯರ ವಿಭಾಗದಲ್ಲಿ ಕ್ಯಾಲ್ಸ್ ತಂಡವು ಚಿನ್ಮಯಿ ವಿದ್ಯಾಲಯದ ವಿರುದ್ಧ ೩-೦ ಗೋಲುಗಳ ಭರ್ಜರಿ ಜಯ ಸಾಧಿಸಿತು.

೧೭ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ರೋಚಕವಾಗಿ ನಡೆದ ಪಂದ್ಯದಲ್ಲಿ ಕ್ಯಾಲ್ಸ್ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ೩-೨ ಗೋಲುಗಳಿಂದ ಗೆಲುವು ಸಾಧಿಸಿತು.

೧೯ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಫ್ರಾಂಕ್ ಆಂಟನಿ ಪಬ್ಲಿಕ್ ಸ್ಕೂಲ್ ವಿರುದ್ಧ ಸೆಣಸಿದ ಕ್ಯಾಲ್ಸ್ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ೨-೧ ಗೋಲುಗಳ ರೋಚಕ ಜಯ ದಾಖಲಿಸಿತು. ಪ್ರಾದೇಶಿಕ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸಿ ಆಯ್ಕೆಯಾಗುವ ಹಾಕಿಪಟುಗಳು ಮುಂಬರುವ ರಾಷ್ಟçಮಟ್ಟದ ಸಿಐಎಸ್‌ಸಿಇ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ-ಗೋವಾ ವಲಯದ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಹಾಕಿ ಪಟುಗಳನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.