ಮಡಿಕೇರಿ: ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಮತ್ತು ಕೊಡಗು ಡಿ.ಸಿ.ಸಿ ಬ್ಯಾಂಕ್ ಸಂಪಾಜೆ ಶಾಖೆಯ ಜಂಟಿ ಆಶ್ರಯದಲ್ಲಿ ಸಂಪಾಜೆಯಲ್ಲಿ ೮೦ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸಾರಿಗೆ ಇಲಾಖೆಯ ನಿವೃತ್ತ ನೌಕರರಾದ ಶಿವರಾಮ ಪಾಲೆಪ್ಪಾಡಿ ಧ್ವಜಾರೋಹಣ ಗೈದು ಶುಭಹಾರೈಸಿದರು. ಹಾಗೆಯೇ ಸಂಘದ ಬಾಲಂಬಿ ಚೆಂಬು ಶಾಖೆಯಲ್ಲಿ ನಡೆದ ಸ್ವಾತಂತ್ರ‍್ಯೋತ್ಸವದಲ್ಲಿ ಚೆಂಬು ಗ್ರಾಮದ ಪ್ರಗತಿಪರ ಕೃಷಿಕರಾದ ಗೋಪಾಲಕೃಷ್ಣ ಹೊಸೂರು ಅವರು ಧ್ವಜಾರೋಹಣಗೈದರು.
ಸಂಘದ ಅಧ್ಯಕ್ಷರಾದ ಯನ್.ಸಿ ಅನಂತ್ ಊರುಬೈಲು ಅವರು ಎರಡೂ ಸಮಾರಂಭಗಳಲ್ಲಿ ಮಾತನಾಡಿ, ಸರ್ವರಿಗೂ ಸ್ವಾತಂತ್ರ‍್ಯ ದಿನಾಚರಣೆಯ ಶುಭಾಶಯ ಕೋರಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಕೆ ಆನಂದ ಸ್ವಾಗತಿಸಿ, ಬಿ.ಸಿ ರೇಣುಕಾಕ್ಷ ವಂದಿಸಿದರು.
ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ಅಧಿಕಾರಿ ವಿನಿತಾ ಉತ್ತಪ್ಪ ಮತ್ತು ಸಿಬ್ಬಂದಿ ವರ್ಗ, ಸಂಘದ ಉಪಾಧ್ಯಕ್ಷ ಯಶವಂತ ಡಿ.ಡಿ ಮತ್ತು ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಊರಿನವರು ಭಾಗವಹಿಸಿದ್ದರು.