ಮಡಿಕೇರಿ: ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಟೋಲ್ ಗೇಟ್ ಬಳಿ ಇರುವ ವಿಶ್ವಮಾನವ ಉದ್ಯಾನವನದಲ್ಲಿ ೮೦ನೇ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತುಳುವೆರ ಜಾನಪದ ಕೂಟದ ಜಿಲ್ಲಾ ಖಜಾಂಚಿ ಪ್ರಭು ರೈ ಅವರು ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಅತಿಥಿಗಳಾಗಿ ಆಗಮಿಸಿದಂತಹ ತುಳು ಮಹಾಸಭಾದ ಜಿಲ್ಲಾಧ್ಯಕ್ಷರಾದ ಬಿ.ಬಿ ಐತಪ್ಪ ರೈ ಅವರು ಧ್ವಜಾರೋಹಣ ನೆರವೇರಿಸಿದರು. ಮಾಜಿ ಸೈನಿಕರಾದ ಸುಬೇದಾರ್ ಎ.ದೇವಯ್ಯ ಅವರು ಸ್ವಾತಂತ್ರ‍್ಯ ಸಂಗ್ರಾಮದ ಬಗ್ಗೆ ಮಾಹಿತಿ ನೀಡಿದರು.
ಮಾಜಿ ನಗರಸಭೆ ಉಪಾಧ್ಯಕ್ಷರಾದ ಟಿ.ಎಂ. ಅಯ್ಯಪ ಅವರು ಮಾತನಾಡಿ, ಸ್ವಾತಂತ್ರö್ಯ ದಿನದ ಮಹತ್ವವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷರಾದ ರವಿ ಗೌಡ, ಉಪಾಧ್ಯಕ್ಷರಾದ ನಾಗೇಶ್, ಕಾರ್ಯದರ್ಶಿ ಅಕ್ಷಿತ್ ಮೂರ್ನಾಡು, ಅಧ್ಯಕ್ಷರಾದ ವಸಂತ್, ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಪ್ರಸಾದ್, ಕಾರ್ಯದರ್ಶಿ ಗಿಲ್ಲಿ ಗೌಡ, ಕಾರ್ಮಿಕ ಘಟಕದ ದಿವ್ಯ, ನಗರ ಅಧ್ಯಕ್ಷರಾದ ಭರತ್, ಪೂರ್ಣಿಮಾ, ರೂಪ, ಪ್ರಮುಖರಾದ ಬಾಲಕೃಷ್ಣ ನಾಯಕ್, ಅಜಿತ್, ಅನಂತ್ ಗೌಡ, ಸೈಮಾನ್, ದೀಕ್ಷಿತ್, ವಿನೋದ್, ವಸಂತ್ ಭಟ್, ಚಿಮ್ಮಣ್ಣ, ಇಸ್ಮಾಯಿಲ್, ಕೂರ್ಗ್ ಬ್ಲಡ್ ಫೌಂಡೇಶನ್‌ನ ಸಮೀರ್ ಹಾಗೂ ಇನ್ನೂ ಹಲವರು ಪಾಲ್ಗೊಂಡಿದ್ದರು.