ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ೮೦ನೇ ಸ್ವಾತಂತ್ರö್ಯ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ವಿಎಸ್ಎಸ್ಎನ್
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜಿ.ಬಿ. ಸೋಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಸಂಘದ ನಿರ್ದೇಶಕ ಕೆ.ಟಿ. ಸುಭಾಷ್ ವಂದೇ ಮಾತರಂ ಹಾಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಹೆಚ್.ಕೆ. ಚಂದ್ರಶೇಖರ ಹುಲ್ಲೂರಿಕೊಪ್ಪ ಸೇರಿದಂತೆ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಪಿ. ರವೀಂದ್ರ ಹಾಗೂ ಸಿಬ್ಬಂದಿಗಳು ಇದ್ದರು.
ಖ್ಯಾತಿ ಸರ್ಕಾರಿ ಶಾಲೆ: ಕೊಡ್ಲಿಪೇಟೆ ಹೋಬಳಿಯ ಊರುಗುತ್ತಿ -ಖ್ಯಾತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ರಾಧಾ ಅವರು ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕಿ ಚಂದ್ರಕಲಾ ಅವರು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬಾಟಲ್ಗಳನ್ನು ವಿತರಿಸಿದರು. ಈ ಸಂದರ್ಭ ಪ್ರಮುಖರಾದ ದಾಕ್ಷಾಯಿಣಿ ಕಾಂತರಾಜ್, ಗಣೇಶ್, ಶಿವಗಣೇಶ್, ಎಸ್ಡಿಎಂಸಿ ಉಪಾಧ್ಯಕ್ಷ ಜೀವನ್, ಸಹ ಶಿಕ್ಷಕ ಅಶೋಕ್, ಎಸ್ಡಿಎಂಸಿ ಸದಸ್ಯರುಗಳು ಹಾಗೂ ಸಿಬ್ಬಂದಿ ರೂಪಾ ಸೇರಿದಂತೆ ಇತರರು ಇದ್ದರು.
ಜೆ.ಸಿ.ಐ. ಸಂಸ್ಥೆ
೮೦ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಚೌಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಯೂನಿಫಾರಂ, ಸಾಕ್ಸ್ ಹಾಗೂ ಪೆನ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಕಾರ್ಯದರ್ಶಿ ಜ್ಯೋತಿ, ಖಜಾಂಚಿ ಪವಿತ್ರ, ನಿಕಟಪೂರ್ವ ಅಧ್ಯಕ್ಷೆ ಜಗದಾಂಬ, ಅರುಣ್, ಮನೋಹರ್, ಪುಷ್ಪಕ್, ಲಿಂಗರಾಜು, ಗುರುಪ್ರಸಾದ್, ಪ್ರತಿಮಾ ಸೇರಿದಂತೆ ಸದಸ್ಯರುಗಳು, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಕಲ್ಕಂದೂರು ಜನಶಕ್ತಿ ವೇದಿಕೆ
ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ಮತ್ತು ಕಲ್ಕಂದೂರಿನ ಜನಶಕ್ತಿ ವೇದಿಕೆ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಪಂಚಾಯಿತಿ ಆವರಣದಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಧ್ವಜಾರೋಹಣವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಮಿತ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಶಾಂತ್ಕುಮಾರ್, ಜನಶಕ್ತಿ ಸಂಘಟನೆಯ ಅಧ್ಯಕ್ಷ ರವಿಶ್ ಕಲ್ಕಂದೂರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚಂದ್ರಿಕಾ, ಸಿಬ್ಬಂದಿ ಚಿತ್ರ, ಮಾಜೀ ಸದಸ್ಯೆ ಸುಶೀಲ, ಜನಶಕ್ತಿ ವೇದಿಕೆಯ ಉಮ್ಮರ್ ಇಬ್ರಾಹಿಂ ಇದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಲೆಕ್ಕಿಗ ಎನ್. ರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇನ್ನರ್ವೀಲ್ ಸಂಸ್ಥೆ
ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ೮೦ನೇ ಸ್ವಾತಂತ್ರö್ಯ ದಿನಾಚರಣೆ ಪ್ರಯ Äಕ್ತ ಪಟ್ಟಣದ ಎಸ್.ಜೆ.ಎಂ. ಶಾಲಾ ವಿದ್ಯಾರ್ಥಿಗಳಿಗೆ ಟ್ರಾö್ಯಕ್ ಸೂಟ್ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕ್ಲಬ್ ಅಧ್ಯಕ್ಷೆ ಲತಾ ಮಂಜು, ಪದಾಧಿಕಾರಿಗಳಾದ ಅಮೃತ ಕಿರಣ್, ವನಿತಾ ಜಯರಾಮ್, ಕಾವೇರಿ ಸುರೇಶ್, ರಾಜೇಶ್ವರಿ ಸುರೇಶ್, ಲತಾ ನಾಗೇಶ್, ದಿವ್ಯಾ ದಯಾಕರ್, ಶಾಲಾ ಮುಖ್ಯ ಶಿಕ್ಷಕ ಮಾರಪ್ಪ ಇದ್ದರು.
ಕುವೆಂಪು ವಿದ್ಯಾಸಂಸ್ಥೆ
ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ೮೦ನೇ ಸ್ವಾತಂತ್ರö್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಾಜಿ ಸೈನಿಕ ಎನ್.ಯು.ಚಂದ್ರಕುಮಾರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಭಾತ್ಮೀದಾರ ಕೆ.ಎಂ.ಜಗದೀಶ್, ನಿರ್ದೇಶಕ ಕೆ.ಟಿ.ಪರಮೇಶ್, ಪ್ರಾಂಶುಪಾಲೆ ಮಿಲ್ಡ್ರೆಡ್ ಗೋನ್ಸಾಲ್ವೆಸ್, ಕಾಫಿ ಮಂಡಳಿ ಎಸ್ಎಲ್ಒ ಉಪೇಂದ್ರ ಕುಮಾರ್ ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರೋಟರಿ ಸಂಸ್ಥೆ
ಸಮೀಪದ ಬೇಳೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಸೋಮವಾರಪೇಟೆ ಹಿಲ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರೋಟರಿ ಸಂಸ್ಥೆಯಿAದ ಶಾಲೆಗೆ ಸಿ.ಸಿ. ಕ್ಯಾಮೆರಾ, ಮಾನಿಟರ್, ಎಲ್.ಕೆ.ಜಿ-ಯು.ಕೆ.ಜಿ. ಕೊಠಡಿಗಳ ಗೋಡೆಗಳಿಗೆ ಸುಣ್ಣಬಣ್ಣ ಬಳಿಯುವ ಯೋಜನೆಯನ್ನು ರೂ. ೪೫ ಸಾವಿರ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಸುಂದರ್ ಹೇಳಿದರು. ಕಾರ್ಯಕ್ರಮದಲ್ಲಿ ರೋಟರಿ ಸೋಮವಾರಪೇಟೆ ಹಿಲ್ಸ್ನ ಅಧ್ಯಕ್ಷ ಸುಂದರ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಜಾನಕಿ ಸಭಾಂಗಣದಲ್ಲಿ ರೋಟರಿ ಸದಸ್ಯರಿಗೆ ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕೆಟಿಡಿಓ ಸಂಸ್ಥೆ
ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಹಾಗೂ ಟ್ರೇಡ್ ಯೂನಿಯನ್ ವತಿಯಿಂದ ಪಟ್ಟಣದ ಜಿ.ಸಿ.ವೇದಿಕೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ನಡೆಯಿತು.
ಪೊಲೀಸ್ ವೃತ್ತನಿರೀಕ್ಷಕ ಮುದ್ದು ಮಾದೇವ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸೈನಿಕ ಚಂದ್ರಕುಮಾರ್, ವೈದ್ಯರಾದ ಜಯರಾಜ್ ಹಾಗೂ ಪೌರಕಾರ್ಮಿಕರಾದ ಕಾಳಮ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಸಂತಾಚಾರ್ಯ ವಹಿಸಿದ್ದರು. ಈ ಸಂದರ್ಭ ಪತ್ರಕರ್ತ ಎಸ್.ಮಹೇಶ್, ಕರ್ನಾಟಕ ರಕ್ಷಣಾ ವೇದಿಕೆ ನಗರಾಧ್ಯಕ್ಷ ಮಂಜುನಾಥ್, ನಿವೃತ್ತ ಶಿಕ್ಷಕ ರಾಜಪ್ಪ, ಪ್ರಮುಖರಾದ ಭಾಸ್ಕರ್, ಕೃಷ್ಣಕುಮಾರ್, ಜಲೀಲ್ಸಾಬ್, ಮದನ್, ವಿಕಿಲ್ ರೈ, ಜಗದೀಶ್, ಪ್ರಸನ್ನ, ಗಣೇಶ, ಸುನೀಲ್, ನಿತಿನ್, ವಿಶ್ವ, ರೋಹಿತ್ ಪೂಜಾರಿ ಇದ್ದರು. ಸಿ.ಕೆ.ಸೈನಿಕ ತರಬೇತಿ ಶಾಲೆಯ ವಿದ್ಯಾರ್ಥಿಗಳು ಧ್ವಜವಂದನೆ ಹಾಗೂ ಗೌರವ ರಕ್ಷೆ ಸಲ್ಲಿಸಿದರು.
ಕಲ್ಕಂದೂರು ಮಸೀದಿ
ಕಲ್ಕಂದೂರು ಮುಯ್ಯದ್ದೀನ್ ಜುಮಾ ಮಸೀದಿ ವತಿಯಿಂದ ಮಸೀದಿಯ ಆವರಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಶರೀಫ್ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಜುಮಾ ಮಸೀದಿಯ ಕಾರ್ಯದರ್ಶಿ ಅಬ್ಧುಲ್ ರಹಮಾನ್, ಖತೀಬರಾದ ಅಬ್ದುಲ್ಲಾ ಸಖಾಫಿ ಎಮ್ಮೆಮಾಡು, ಸದರ್ ಉಸ್ತಾದ್ ಆಶೀಕ್ ಸಖಾಫಿ, ಜುಮಾ ಮಸೀದಿಯ ಸದಸ್ಯರು, ಜಮಾಅತ್ ಸದಸ್ಯರು, ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಾಂದೀಪನಿ ಶಾಲೆ
ಸಮೀಪದ ಸಾಂದೀಪನಿ ಶಾಲೆಯಲ್ಲಿ ೮೦ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಧರಾದ ವೀರೇಶ್ ಅಬ್ಬೂರು ಕಟ್ಟೆ ಅವರು ಧ್ವಜಾರೋಹಣ ನೆರವೇರಿಸಿದರು. ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ವೀರೇಶ್ ಅವರನ್ನು ಸನ್ಮಾನಿಸಲಾಯಿತು.