ಈ ಕಪ್ಪು ಬಿಳುಪಿನ ಆ ಛಾಯಾಚಿತ್ರ ಎಷ್ಟು ಚೆನ್ನಾಗಿದೆ ಅಲ್ಲವೇ..! ನೋಡುವಾಗ ಹಿಂದಿನ ಗತವೈಭವದ ಕಥೆಗಳು, ನೆನಪುಗಳು, ಬಾಂಧವ್ಯ ಎಲ್ಲವೂ ಕಣ್ಣ ಮುಂದೆ ತೇಲಿ ಬರುತ್ತದೆ. ಇದ್ಯಾವ ಛಾಯಾಚಿತ್ರವೆಂದು ಯೋಚಿಸುತ್ತಿರಬಹುದಲ್ಲವೇ ಹೌದು !ಕಪ್ಪು ಬಿಳುಪು ಬೆಳಕಿನ ಅರಮನೆಯ ಚಿತ್ರವನ್ನು ಒಮ್ಮೆ ನೋಡಿದರೆ ಮನಸ್ಸಿನಲ್ಲಿ ಉಂಟಾಗುವ ಸಂಚಲನ ಸಂತೋಷ ಕಣ್ಣಮುಂದೆ ತೇಲಿ ಹೋಗುತ್ತದೆ. ಎಷ್ಟೇ ವರ್ಷದ ಹಳೆಯ ಛಾಯಾಚಿತ್ರವಾಗಿದ್ದರೂ ಅದರ ಗುಣಮಟ್ಟ ಇಂದಿಗೂ ಕೂಡ ಆಕರ್ಷಕವಾಗಿಯೇ ಇದೆ.

ಹಿಂದೆ ಒಂದು ಫೋಟೋ ತೆಗೆಸಿಕೊಳ್ಳಬೇಕಾದರೆ ದೂರದ ಪಟ್ಟಣಕ್ಕೆ ಬಸ್ಸು ಹತ್ತಿ ಪ್ರಯಾಣಿಸಿ ಅಲ್ಲೊಂದಿಷ್ಟು ಕನ್ನಡಿಯ ಮುಂದೆ ಸಿಂಗರಿಸಿಕೊAಡು ಅವರು ಹೇಳುವ ಸ್ಥಳದಲ್ಲಿ ನಿಂತು, ಕುರ್ಚಿಯಲ್ಲಿ ಕುಳಿತು ತಲೆಯನ್ನು ಎಡಕ್ಕೆ ಬಲಕ್ಕೆ ತಿರುಗಿಸಿ ಮುಗುಳ್ನಗಲು ಹೇಳಿದರೆ ಮಾತ್ರ ಮುಗುಳ್ನಕ್ಕು ಆ ಫೋಟೋ ಪಡೆಯಲು ಅವರು ಮತ್ತೊಂದು ದಿನಾಂಕವನ್ನು ನೀಡಿ, ಆ ದಿನಾಂಕದವರೆಗೆ ಕುತೂಹಲದ ಮೇಲೆ ಕುತೂಹಲದಿಂದ ಕಾದು ಮತ್ತೊಮ್ಮೆ ಪಟ್ಟಣ, ಮತ್ತೊಂದು ದಿನ ಸ್ಟುಡಿಯೋ ತಲುಪಿ ಅದನ್ನು ಸಂಗ್ರಹಿಸಿ ತಂದು ದಿನಕ್ಕೆ ಸಾವಿರ ಬಾರಿ ನೋಡಿದರೂ ಸಮಾಧಾನವಾಗದ ಛಾಯಾಚಿತ್ರವದು. ರಜೆ ದಿನಗಳಲ್ಲಿ ಮತ್ತೊಮ್ಮೆ ಮಗದೊಮ್ಮೆ ನೋಡುತ್ತಾ ನೆಂಟರಿಷ್ಟರು ಬಂದಾಗ ಅವರ ಮುಂದೆ ಹಲ್ಲು ಕಿರಿದು ಪ್ರದರ್ಶಿಸುತ್ತಾ ಪಡುವ, ಪಡುತ್ತಿದ್ದ ಸಂಭ್ರಮವೇ ಬೇರೆ.

ಇಂದಿಗೂ ಪ್ರತಿಯೊಬ್ಬರ ಮನೆಯ ಗೋಡೆಯ ಮೇಲೆ ಹಿರಿಯರ ಕಪ್ಪು ಬಿಳುಪಿನ ಚಿತ್ರಗಳು ರಾರಾಜಿಸುತ್ತಲೇ ಇವೆ. ಹಿಂದೆ ಶಾಲಾ-ಕಾಲೇಜುಗಳಲ್ಲಿ ಫೋಟೋ ತೆಗೆಯಲೆಂದೇ ಒಂದು ದಿನವನ್ನು ಗುರುತಿಸಲಾಗುತ್ತಿತ್ತು. ದಿನಪತ್ರಿಕೆಯನ್ನು ಓದುವಾಗ ಅದರಲ್ಲಿ ಬರುತ್ತಿದ್ದ ಕಪ್ಪು ಬಿಳುಪಿನ ಚಿತ್ರವನ್ನು ಮತ್ತೆ-ಮತ್ತೆ ನೋಡಿ ಕಣ್ ತುಂಬಿಕೊಳ್ಳುತ್ತಿದ್ದೆವು. ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಆಗಸ್ಟ್ ೧೯ ರಂದು "ವಿಶ್ವ ಛಾಯಾಗ್ರಹಣ" ದಿನವನ್ನು ಆಚರಿಸಲಾಗುತ್ತದೆ.

"ಒಂದು ಚಿತ್ರ ಸಾವಿರ ಪದಗಳಿಗೆ ಸಮ". ಇಂದು ವಿಶ್ವ ಛಾಯಾಗ್ರಹಣ ದಿನ. ಛಾಯಾಗ್ರಹಣವು ಇಂದಿನ ಯುವಜನತೆಯ ನೆಚ್ಚಿನ ಕ್ಷೇತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾರೆ. ಹೆಚ್ಚಿನ ಜನರ ಫ್ಯಾಷನ್ ಆಗಿ ಫೋಟೋಗ್ರಫಿ ಮಾರ್ಪಟ್ಟಿದೆ. ಛಾಯಾಗ್ರಹಣಕ್ಕೆ ಇರುವ ಸಾಮರ್ಥ್ಯವೇ ಅಂತಹದ್ದು, ಪದಗಳಲ್ಲಿ ವರ್ಣಿಸಲಸಾಧ್ಯವಾದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಮಾತಾಡುತ್ತದೆ.

೧೯೩೯ರ ಆಗಸ್ಟ್ ೧೯ರಂದು ಫ್ರಾನ್ಸ್ ದೇಶದಲ್ಲಿ ಮೊದಲ ಬಾರಿಗೆ "ವಿಶ್ವ ಛಾಯಾಗ್ರಹಣ ದಿನ"ವನ್ನು ಘೋಷಿಸಲಾಯಿತು. ಆದರೆ ಜಾಗತಿಕ ಮಟ್ಟದಲ್ಲಿ ಛಾಯಾಚಿತ್ರಕ್ಕಿರುವ ಮನ್ನಣೆಯನ್ನು ಗಮನಿಸಿ ೨೦೧೦ ರಲ್ಲಿ ಆಗಸ್ಟ್ ೧೯ ರಂದು ವಿಶ್ವ ಮಟ್ಟದಲ್ಲಿ ಭಾರತವು ಸೇರಿದಂತೆ ಅಂದಾಜು ೧೦೦ ದೇಶಗಳಲ್ಲಿ ಆನ್‌ಲೈನ್ ಗ್ಯಾಲರಿಗಳು ಮೊದಲ "ಛಾಯಾಗ್ರಹಣ ದಿನ"ವನ್ನು ಆಚರಿಸಿತು.

"ಛಾಯಾ" ಎಂದರೆ ನೆರಳು, ಮನುಷ್ಯನ ನೆರಳನ್ನು ಬೆಳಕಿನ ಮೂಲಕ ಸೆರೆಹಿಡಿದು ಅದಕ್ಕೆ ಬಣ್ಣದ ಮೂಲಕ ರೂಪವನ್ನು ನೀಡುವುದು. ಅಂದರೆ "ಬೆಳಕು" ಮತ್ತು "ರೇಖಾಚಿತ್ರ, ಬರವಣಿಗೆ" ಎಂದರ್ಥ. ಒಟ್ಟಾಗಿ "ಬೆಳಕಿನೊಂದಿಗೆ ಚಿತ್ರಿಸುವುದು" ಎಂಬರ್ಥವನ್ನು ನೀಡುತ್ತದೆ.

‘ಫೋಟೋಗ್ರಫಿ' ಎಂಬುದು ಗ್ರೀಕ್ ಭಾಷೆಯ ಪದ. 'ಪೋಸ್' ಎಂದರೆ ಬೆಳಕು, 'ಗ್ರಾಫಿಯಿನ್' ಎಂದರೆ ಬೆಳಕಿನಿಂದ ಬರೆದದ್ದು ಛಾಯಾಗ್ರಹಣ. ಛಾಯಾಗ್ರಾಹಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ವಿಶ್ವ, ದೇಶ, ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ವಿಶ್ವ ಛಾಯಾಗ್ರಹಣ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಮಹಾರಾಜರುಗಳ ಕಾಲದಲ್ಲಿ ರಾಜನ ಚಿತ್ರವನ್ನು ಗೋಡೆಯ ಮೇಲೆ ಕೆತ್ತಿಸಲಾಗುತ್ತಿತ್ತು. ಕಪ್ಪು ಬಿಳುಪಿನಲ್ಲಿ ಚಿತ್ರವನ್ನು ಬರೆಸಲಾಗುತ್ತಿತ್ತು.

ಈ ದಿನ ವಿಶ್ವ ಫೋಟೋಗ್ರಫಿ ದಿನದ ಇತಿಹಾಸವನ್ನು ನೆನಪಿಸಿಕೊಳ್ಳುವುದರ ಜೊತೆಗೆ, ಜಾಗೃತಿಯನ್ನು ಮೂಡಿಸಲಾಗುತ್ತದೆ. ಮುಂದಿನ ಪೀಳಿಗೆಗೆ ತಜ್ಞರ ಅನುಭವ, ತಾಂತ್ರಿಕ ಕೌಶಲ್ಯಗಳ, ಪ್ರೇರಣೆ ನೀಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಈ ಪದವನ್ನು ಮೊದಲ ಬಾರಿಗೆ ಆವಿಷ್ಕರಿಸಿದವರು ಸರ್ ಜಾನ್ ಹರ್ಷೆಲ್.

ಜಾರ್ಜ್ ಈಸ್ಟ್ಮನ್, ಹಿಪೊಲೈಟ್ ಬೇಯರ್ಡ್, ಹರ್ಬರ್ಟ್ ಬೋಯರ್ ಬಕ್ಲಿç ಫ್ರೆಡ್ರಿಕ್ ಲಾಂಮ್ ಮೊದಲಾದವರ ಶ್ರಮವೇ ಇಂದಿನ ಆಧುನಿಕ ಕ್ಯಾಮೆರಾಗಳು. ಈ ಛಾಯಾಗ್ರಹಣ ದಿನದ ಹುಟ್ಟು ಎಂದರೆ ‘ಡೆಗೋರಿಯೋ' ಮಾದರಿಯ ಕ್ಯಾಮೆರಾ ಆವಿಷ್ಕಾರಗೊಂಡ ದಿನವೇ ಆಗಿದೆ. ಲೂಯಿಸ್ ಡೆಗೋರಿಯೋ ಎಂಬ ಮಹಾನುಭಾವ ತನ್ನ ಸತತ ಪರಿಶ್ರಮದ ಫಲವಾಗಿ ' ಕ್ಯಾಮೆರಾ' ಕಂಡು ಹಿಡಿದು ಚಿತ್ರಗಳನ್ನು ಸೆರೆ ಹಿಡಿಯುವ ಕನಸಿಗೆ ರೆಕ್ಕೆ ಹಚ್ಚಿದ.

ನಂತರ ೧೮೩೯ರಲ್ಲಿಯ ವಿಲಿಯಮ್ ಫಾಕ್ಸ್ ಟಾಲ್‌ಬಾಟ್ ಎಂಬುವವರು 'ಕ್ಯಾಲೋಟೈಪ್' ಕ್ಯಾಮೆರಾ ಸಂಶೋಧಿಸಿದ. ೧೮೪೧ರಲ್ಲಿ ಈ ಸಂಶೋಧನೆಯನ್ನು ಫ್ರೆಂಚ್ ಸರಕಾರ ಅಧಿಕೃತವಾಗಿ ಘೋಷಿಸಿತು.