ಮಡಿಕೇರಿ, ಆ. ೧೮: ಸುಂಟಿಕೊಪ್ಪ ರಾಷ್ಟಿçÃಯ ಹೆದ್ದಾರಿಯ ಕೊಡಗರಹಳ್ಳಿ ಸಮೀಪ ನಿನ್ನೆ ತಡರಾತ್ರಿ ೧೨.೩೦ ರ ಸಮಯದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಹುಂಡೈ ಕಾರು ತೋಟದೊಳಗೆ ನುಗ್ಗಿ ಪಲ್ಟಿಯಾದ ಘಟನೆ ಸಂಭವಿಸಿದೆ.

ಕಾರು ಟಿ. ನರಸೀಪುರದ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಅದರಲ್ಲಿದ್ದವರು ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳ ದರ್ಶನ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿಯೇ ಕ್ರೇನ್ ಮೂಲಕ ಕಾರನ್ನು ತೋಟದಿಂದ ಹೊರ ತರಲಾಯಿತು.