ಪೊನ್ನAಪೇಟೆ: ವಿಸ್ಮಯ ಪುರುಷ ಸ್ವ-ಸಹಾಯ ಸಂಘದ ವತಿಯಿಂದ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚೀನಿವಾಡ ಮಾಪಿಳೆತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಾವೇರಿ ಪಿ.ಎಂ ಧ್ವಜಾರೋಹಣವನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾ ಪಂ. ಮಾಜಿ ಸದಸ್ಯ ಮಂಡೇಚAಡ ರಾಜಿ ಪೊನ್ನಪ್ಪ ಹಾಗೂ ನಿವೃತ್ತ ಆರೋಗ್ಯ ಕಾರ್ಯಕರ್ತೆ ಚೋಡುಮಾಡ ವೇದಾವತಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಾದ ಜ್ಯೋತಿ, ಭೂಮಿಕ ಹಾಗೂ ಅಜಯ್ ಭಾಷಣ ಮಾಡಿದರು.
ವಿದ್ಯಾರ್ಥಿಗಳಾದ ಶ್ವೇತಾ ಮತ್ತು ಜ್ಯೋತಿ ತಂಡದವರಿAದ ದೇಶಭಕ್ತಿ ಗೀತೆ ಗಾಯನ ನಡೆಯಿತು. ಏಳನೇ ತರಗತಿ ವಿದ್ಯಾರ್ಥಿಗಳಾದ ಭೂಮಿಕ ಹಾಗೂ ಜ್ಯೋತಿ ಕಾರ್ಯಕ್ರಮದಲ್ಲಿ ಯೋಗಾಸನ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸುಜಾತ, ಕೇಚೇಟ್ಟಿರ ಲಲಿತಾ, ಅಂಗನವಾಡಿ ಕಾರ್ಯಕರ್ತೆ ಸುಕನ್ಯ, ಶಾಲಾ ಶಿಕ್ಷಕರು, ಪೋಷಕರು ಹಾಗೂ ವಿಸ್ಮಯ ಪುರುಷ ಸ್ವ-ಸಹಾಯ ಸಂಘದ ಅಧ್ಯಕ್ಷ ಮನೋಜ್, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಅವಿನಾಶ್ ಹಾಗೂ ಸದಸ್ಯರಾದ ಸೈಯದ್, ಶೀಲನ್, ಚಂದ್ರಶೇಖರ್, ಇರ್ಷಾದ್ ಪಿ.ಯು, ಅನ್ಸರ್, ರಂಶಿದ್, ಸನೋಶ್, ದೀಕ್ಷಿತ್, ರೋಷನ್, ಡೈಶನ್ ಜಾನ್, ಇರ್ಷಾದ್ ಪಿ.ಎಂ ಸೇರಿದಂತೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು .
ಶಿಕ್ಷಕಿ ರಸೀನ ಪಿ.ಎ ಸ್ವಾಗತಿಸಿ, ಅನಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಸುಜಾತ ವಂದಿಸಿದರು.