ಪೊನ್ನಂಪೇಟೆ: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದಲ್ಲಿ ೮೦ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜುನೈದ್ ಸಿ.ಎ. ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮವನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಟಿ.ಎಸ್. ಮಹೇಶ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳ ಪಥಸಂಚಲನವು ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆಯಿತು. 'ಭಾರತ ಮಾತೆಗೇ ಜೈ' ಎಂಬ ಘೋಷಣೆ ಮೊಳಗಿಸುತ್ತಾ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಮೆರವಣಿಗೆ ನಡೆಸಿದರು. ವಿವಿಧ ಸ್ವಾತಂತ್ರ‍್ಯ ಹೋರಾಟಗಾರರ ಛದ್ಮವೇಷದಲ್ಲಿ ಮಕ್ಕಳು ಕಾಣಿಸಿಕೊಂಡು ಸಾರ್ವಜನಿಕರ ಗಮನ ಸೆಳೆದರು. ಪಥಸಂಚಲನದಲ್ಲಿ ಪೋಷಕರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಅತಿಥಿಗಳು ಭಾಗವಹಿಸಿದ್ದರು. ಕೆನರಾ ಬ್ಯಾಂಕ್ ಪೊನ್ನಂಪೇಟೆ ಹಾಗೂ ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ವತಿಯಿಂದ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಶಾಲೆಯ ಹಿರಿಯ ಮುಖ್ಯೋಪಾಧ್ಯಾಯರಾದ ಬಿ.ಎಂ. ವಿಜಯ್ ಅವರು ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ್ದ ಜುನೈದ್ ಅವರು ಮಾತನಾಡಿ, ಜಾತಿ-ಧರ್ಮ ಭೇದ ಮರೆತು ದೇಶದ ಏಕತೆ ಹಾಗೂ ಸೌಹಾರ್ದತೆ ಕಾಪಾಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಮಕೃಷ್ಣ ಕೆ.ವಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ನಾಗವೇಣಿ ಮಾತನಾಡಿದರು. ದಿನದ ಮಹತ್ವದ ಬಗ್ಗೆ ಸಹಶಿಕ್ಷಕ ವೆಂಕಟೇಶ್ ಅವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಭಾಷಣ, ದೇಶಭಕ್ತಿ ಗೀತೆ, ಕಿರುನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಮಂಜುನಾಥ್, ಮೆಲ್ವಿನ್, ಕನ್ಯಾಕುಮಾರಿ, ಮಂಜುಳ ಎಸ್, ಸವಿತಾ, ಕಮಲ, ಕಾವೇರಿ, ಮಂಜುಳ ಸಿ, ಸುಮಿತ್ರಾ, ಗಿರಿಜಾ, ಪ್ರಮೀಳಾ, ಮಂಜುಳ ಹಾಗೂ ಶಿಕ್ಷಕರಾದ ಶಕೀಲ ಬಾನು, ಶಾಹಿದಾ, ರೋಜಿ, ಗಂಗಾಮಣಿ, ನಿಂಗರಾಜು, ಮಹೇಶ್, ವಿನೀತಾ, ದಾಕ್ಷಾಯಿಣಿ, ಮಂಜುಳಾ, ರೇಖಾ, ಪೂರ್ಣಿಮಾ ಹಾಗೂ ಅತಿಥಿ ಶಿಕ್ಷಕರಾದ ಸಂತೋಷ್, ದಕ್ಷ, ನಸಿಯತ್, ಹಸೀನಾ, ಜಿಶಾ, ಪೋಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂತೋಷ್ ಕುಮಾರ್ ಲೋಬೋ ನಿರೂಪಿಸಿದರು. ಶಾಹಿದಾ ವಂದನಾರ್ಪಣೆ ಮಾಡಿದರು.