ಮಡಿಕೇರಿ: ಸ್ಕೌಟ್ ಮತ್ತು ಗೈಡ್ಸ್ನಿಂದ ೮೦ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.

ಜಿಲ್ಲಾ ಭವನ ಕಛೇರಿ ಮುಂಭಾಗದಲ್ಲಿ ಜಿಲ್ಲಾ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯೂ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪದ್ಮಶ್ರೀ ಪುರಸ್ಕೃತೆ ಹಾಗೂ ಗೈಡ್ ಆಯುಕ್ತರು ಆಗಿರುವ ರಾಣಿ ಮಾಚಯ್ಯ, ತರಬೇತಿ ಆಯುಕ್ತ ರಂಜಿತ್, ಸಹಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಸ್ಕೌಟ್ ಗೈಡ್ಸ್ನ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಪಿ.ಎಂ ರವಿ ಮೊಗೇರ ಉಪಸ್ಥಿತರಿದ್ದರು.