ಚೆಯ್ಯಂಡಾಣೆ: ಸಮೀಪದ ಕಕ್ಕಬ್ಬೆ-ಕುಂಜಿಲ ಗ್ರಾಮದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೮೦ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಶಾಲೆಯ ವ್ಯವಸ್ಥಾಪಕರಾದ ಶಾಹಿದ್ ಅಲಿ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸಂಖ್ಯಾತ ಹೋರಾಟಗಾರರು ಮತ್ತು ಯೋಧರ ತ್ಯಾಗ, ಬಲಿದಾನಗಳ ಫಲವಾಗಿ ಇಂದು ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ. ಈ ಮಹಾನಾಯಕರ ಆದರ್ಶಗಳನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಶಬ್ರೀನ್ ಫಾತಿಮ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ದೇಶದಲ್ಲಿ ಸಹೋದರತ್ವ ಹಾಗೂ ಭಾವೈಕ್ಯತೆ ಅತ್ಯಂತ ಮುಖ್ಯ ಎಂದರು.

ಶಿಕ್ಷಕರಾದ ಶಹೀರ್ ಅವರು ಮಾತನಾಡಿ, ದೇಶದ ಇತಿಹಾಸ ಹಾಗೂ ಯುವಜನತೆ ದೇಶಕ್ಕಾಗಿ ನೀಡಬೇಕಾದ ಕೊಡುಗೆಯ ಕುರಿತು ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊAಡರು.

ಅAಸಾದ್ ಅವರಿಂದ ದೇಶಭಕ್ತಿ ಗೀತೆಗಳ ಗಾಯನವು ಪ್ರೇಕ್ಷಕರ ಮನಸ್ಸನ್ನು ಸೆಳೆಯಿತು. ಜಾದೂಗಾರರಾದ ವಿಕ್ರಮ್ ಅವರಿಂದ ವಿಶೇಷ ಜಾದೂ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಜಾದೂಗಾರ ವಿಕ್ರಮ್ ಅವರು ವಿದ್ಯಾರ್ಥಿಗಳಿಗೆ ಜಾದೂ ಕಲೆಯ ಕುರಿತು ಕುತೂಹಲಕಾರಿ ಮಾಹಿತಿ ನೀಡಿದ್ದಲ್ಲದೆ, ತಮ್ಮ ವಿಭಿನ್ನ ಹಾಗೂ ರೋಚಕ ಜಾದೂಗಳ ಮೂಲಕ ಎಲ್ಲರಿಗೂ ಮನರಂಜನೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ವ್ಯವಸ್ಥಾಪಕ ಶಾಹಿದ್ ಅಲಿ, ಮುಖ್ಯ ಶಿಕ್ಷಕಿ ಶಬ್ರೀನ್ ಫಾತಿಮಾ, ಶಿಕ್ಷಕರಾದ ಗಗನ್ ಹಾಗೂ ಶಹೀರ್, ಜಾದೂಗಾರರಾದ ವಿಕ್ರಮ್, ಮತ್ತು ಧರ್ಮಗುರುಗಳಾದ ನಿಯಾಜ್ ಹಾಗೂ ಅಂಸಾದ್ ಸಅದಿ, ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಿಕ್ಷಕ ವೃಂದ,ಸಿ ಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.