ಮಡಿಕೇರಿ: ಮಡಿಕೇರಿ ಮಹದೇವಪೇಟೆಯ ಅಬ್ದುಲ್ ಕಲಾಂ ಬಡಾವಣೆಯಲ್ಲನ ಸೌಹಾರ್ದ ಸಮಿತಿಯ ಆಶ್ರಯದಲ್ಲಿ ೮೦ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.

ನಗರಸಭಾ ಸದಸ್ಯರಾದ ಅಮೀನ್ ಮೊಹ್ಸೀನ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು.

ಬಡಾವಣೆಯ ಸೌಹಾರ್ದ ಸಮಿತಿಯ ಅಧ್ಯಕ್ಷರಾದ ಸಾಧು ಸಾದಿಕ್ ಅವರÀ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಅಧ್ಯಕ್ಷರಾದ ನಜೀರ್ ಎಂ.ಎ, ಉಪಾಧ್ಯಕ್ಷ ಎಂ.ಬಿ ಮೊಹಮದ್ ಕೌಸರ್, ಬಿ.ಆರ್ ಜೀವನ್, ಪಾಡೆಯಂಡ ಮಣಿ ಮಾದಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಸಾಧು ಸಾದಿಕ್ ಅವರು ಮಾತನಾಡಿ, ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಅಮೀನ್ ಮೊಹ್ಸೀನ್ ಅವರ ಪಾತ್ರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಅಮೀನ್ ಮೊಹ್ಸೀನ್ ಅವರು ಮಾತನಾಡಿ, ಸ್ವಾತಂತ್ರö್ಯ ಸಂಗ್ರಾಮದಿAದ ನಾವು ಜೀವನ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕೆಂದರು. ಹಿರಿಯರ ಸಾಧನೆಯ ಪ್ರತೀಕವಾಗಿ ಇಂದು ಸ್ವಾತಂತ್ರö್ಯ ದೊರಕಿದೆ ಎಂದರು.

ಧ್ವಜಾರೋಹಣ ಸಂದರ್ಭ ಪ್ರಿಯ ಗುರುಕಿರಣ್, ನಾಜಿಯಾ ಸಾದಿಕ್, ಸೌಮ್ಯ ಜೀವನ್, ಸೀಮಾ, ಸಬಿನಾ, ಡೀನಾ, ಜಬಿನಾ ನೇತೃತ್ವದಲ್ಲಿ ಮಕ್ಕಳಿಂದ ಪಥಸಂಚಲನ ನಡೆಸಿ ಭಕ್ತಿಗೀತೆಗಳನ್ನು ಹಾಡಿಸಲಾಯಿತು.

ಕಾರ್ಯಕ್ರಮವನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ಬೈ.ಶ್ರೀ ಪ್ರಕಾಶ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.