ಮಡಿಕೇರಿ, ಆ. ೧೭: ಭಾರತ ಸರ್ಕಾರದ ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಡಿಯಲ್ಲಿ ಬರುವ ಮಂಗಳೂರಿನ ಶಾಖಾ ಎಂಎಸ್‌ಎAಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿಯ ವತಿಯಿಂದ ಮಡಿಕೇರಿಯಲ್ಲಿ ಹೊಲಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಡಿಕೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಉಚಿತ ಬ್ಲೌಸ್ ಹೊಲಿಗೆ ಕುರಿತು ಆರು ವಾರಗಳ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ತಾ. ೩೧ ರಿಂದ ಆಯೋಜಿಸಲಾಗಿದೆ.
ಹೊಲಿಗೆಯ ಪ್ರಾಯೋಗಿಕ ಕೌಶಲ್ಯಗಳನ್ನು ಒದಗಿಸುವ ಹಾಗೂ ಉದ್ಯಮಶೀಲತೆ, ವ್ಯಾಪಾರ ಅವಕಾಶಗಳು, ಸರ್ಕಾರಿ ಯೋಜನೆಗಳು, ಉದ್ಯಮ್ ನೋಂದಣಿ, ಆರ್ಥಿಕ ನೆರವು ಮತ್ತು ಮಾರುಕಟ್ಟೆ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬಹುದಾಗಿದ್ದು, ಆಸಕ್ತರು ಕಾರ್ಯಕ್ರಮದ ನೋಂದಣಿಗಾಗಿ ಕಾರ್ಯಕ್ರಮ ಸಂಯೋಜಕರಾದ ಸಹಾಯಕ ನಿರ್ದೇಶಕಿ ಸುಮನ್ ಎಸ್. ರಾಜು ಅವರ ಮೊಬೈಲ್ ಸಂಖ್ಯೆ ೯೪೪೮೩೮೩೭೨೦ ಅನ್ನು ಸಂಪರ್ಕಿಸಬಹುದಾಗಿದೆ.