ಮಡಿಕೇರಿ, ಆ. ೧೬: ವಿಶಿಷ್ಟ ಸಂಸ್ಕೃತಿಯ ಕೊಡಗು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು “ಲಾಯಲ್ ಪ್ರವಾಸೋದ್ಯಮ ಕೇಂದ್ರ”ವನ್ನಾಗಿ ಪರಿವರ್ತಿಸಿ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಈ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿ ಅಭಿವೃದ್ಧಿಯನ್ನು ಕಾಣಬೇಕಾಗಿದೆ ಎಂದು ಮಾಜಿ ಸಚಿವ ಅಡಗೂರು ಹೆಚ್.ವಿಶ್ವÀನಾಥ್ ಅಭಿಪ್ರಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಅರಮನೆ ಮತ್ತು ಅಲ್ಲಿನ ಸಂಸ್ಕೃತಿ ಪರಂಪರೆಗಳು ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ. ಅಂತಹ ಅರಮನೆ ಪ್ರಸ್ತುತ ಕೇವಲ ದಸರ ಉತ್ಸವಕ್ಕೆ ಮಾತ್ರ ಸೀಮಿತವಾಗಿರುವುದು ಬೇಸರದ ವಿಚಾರ. ಈ ಹಿನ್ನೆಲೆ ಸೂಚಿತ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ ಲಾಯಲ್ ಪ್ರವಾಸೋದ್ಯಮ ಕೇಂದ್ರದ ಬಗ್ಗೆ ೨೦೧೩ರ ಆಯವ್ಯಯದಲ್ಲೆ ಪ್ರಸ್ತಾಪವಾಗಿದೆ ಎಂದು ತಿಳಿಸಿದರು.

ಸುಂದರ ಪರಿಸರ, ಸಂಸ್ಕೃತಿಯನ್ನು ಹೊಂದಿರುವ ಕೊಡಗು ಜಿಲ್ಲೆಯನ್ನು ಒಳಗೊಂಡ ಈ ಎಲ್ಲಾ ಜಿಲ್ಲೆಗಳಲ್ಲಿನ ಪ್ರವಾಸೋದ್ಯಮದ ಬೆಳವಣಿಗೆಯನ್ನು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಂಭೀರವಾಗಿ ಪರಿಗಣಿಸಬೇಕು. ಸ್ಥಳೀಯ ಪ್ರವಾಸೋದ್ಯಮದ ವಿಷಯಯದ ಬಗ್ಗೆ ಕೊಡಗಿನ ಈರ್ವರು ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಸ್ಥಳೀಯ ಚೇಂಬರ್ ಆಫ್‌ಕಾಮರ್ಸ್, ಹೊಟೇಲ್ ಮಾಲೀಕರುಗಳ ಗಮನ ಸೆಳೆೆದು ಕಾರ್ಯನಿರ್ವಹಿಸುವ ಅಗತ್ಯತೆ ಇರುವುದಾಗಿ ಹೇಳಿದರು.

ಕೊಡಗು ಜಿಲ್ಲೆ ಪ್ರವಾಸೋದ್ಯಮ ಕೇಂದ್ರವೇ ಆಗಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿ, ಹಲವಾರು ದೇಶಗಳ ಆರ್ಥಿಕತೆ ಪ್ರವಾಸೋದ್ಯಮವನ್ನೆ ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರವಾಸೋದ್ಯಮ ಸಾಧ್ಯತೆಗಳಿಗೆ ಹೆಚ್ಚಿನÀ ಒತ್ತು ನೀಡಿ ಅಭಿವೃದ್ಧಿ ಪಡಿಸುವತ್ತ ಸರ್ಕಾರ ಆಸಕ್ತವಾಗಬೇಕೆಂದು ಕರೆ ನೀಡಿದರು.

ಜಿಲ್ಲೆಯ ಇಬ್ಬರು ಶಾಸಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದೂ ಇಲ್ಲಿನ ಶಾಸಕರಿಗೆ ಅಧಿಕಾರ ಸ್ಥಾನಗಳು ದೊರಕದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ, ಈ ಹಿಂದೆ ಜಿಲ್ಲೆÉಯ ಮೂವರು ಜನಪ್ರತಿನಿಧಿಗಳು ಸಚಿವರಾಗಿದ್ದನ್ನು ಪ್ರಸ್ತಾಪಿಸಿ, ಇತ್ತೀಚಿನ ದಿನಗಳಲ್ಲಿ ಕೊಡಗು ಅಧಿಕಾರ ಸ್ಥಾನದಿಂದ ಹಿಂದಿದೆಯೆAದು ವಿಷಾದಿಸಿದರು.

ರಾಜ್ಯದ ನೂತನ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಮುಖ್ಯ ಮಂತ್ರಿಗಳಾಗಿದ್ದಾರೆ. ಹಿಂದೆ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಕಟ್ಟಿದ ಮನೆಗೆ ಬಂದು ಸೇರಿದವರಾದರೆ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಡಿ.ಕೆ.ಶಿವಕುಮಾರ್ ಅವರು ಮನೆ ಕಟ್ಟಿ ಬಂದವರೆAದು ಸೂಚ್ಯವಾಗಿ ನುಡಿದರು.

ಕೊಡಗಿನ ಹೋಂ ಸ್ಟೇ ಸಂಸ್ಕೃತಿ ನಮ್ಮೆಲ್ಲ ಮಿತಿಗಳನ್ನು ಮೀರಿ ಸಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ವಿಶ್ವನಾಥ್, ಆಯಾ ಜಿಲ್ಲೆಗೆ ಸಂಬAಧಿಸಿದ ಸಮಸ್ಯೆಗಳ ಬಗೆಹರಿಕೆಗೆ ಸರ್ಕಾರಗಳು ಚರ್ಚಿಸಿ, ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಹೋಗಬೇಕು. ಆಗ ಮಾತ್ರ ಸಮಸ್ಯೆಗಳ ಬಗೆಹರಿಕೆ ಸಾಧ್ಯವಾಗಬಹುದೆಂದರು.

ಮುAದಿನ ರಾಜಕೀಯ ನಡೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ಇಲ್ಲಿಯವರೆಗೆ ನಮ್ಮ ಇತಿಮಿತಿಗಳಲ್ಲಿ ಉತ್ತಮವಾದ ರೀತಿಯಲ್ಲಿ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದೇನೆ. ಇನ್ನು ಮುಂದೆ ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ ಮತ್ತು ದೊಡ್ಡ ಮೊತ್ತವನ್ನು ಬಯಸುವ ಚುನಾವಣಾ ರಾಜಕೀಯ ಸಾಧ್ಯವೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಅಡಗೂರು ವಿಶ್ವನಾಥ್ ಬೆಂಬಲಿಗ ಕೆ.ಎಂ.ಗಣೇಶ್ ಉಪಸ್ಥಿತರಿದ್ದರು.