ಮಡಿಕೇರಿ, ಆ. ೧೬: ಕೊಡಗು ಏಕೀಕರಣ ರಂಗದಿAದ ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೂಲಕ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಆಭರಣವನ್ನು ಸಮರ್ಪಿಸಲಾಯಿತು.

ಹಲವು ವರ್ಷಗಳ ಹಿಂದೆ ಕಾವೇರಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಸಂಬAಧ ಕೊಡಗು ಏಕೀಕರಣ ರಂಗದ ನಿಯೋಗವೊಂದು ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ನೆರವು ಕೋರಲು ತೆರಳಿದ್ದಾಗ ಎಸ್.ಎಂ. ಕೃಷ್ಣ ಅವರ ಭೇಟಿ ಸಾಧ್ಯವಾಗಿರಲಿಲ್ಲ. ಆ ಸಂದರ್ಭ ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಅವರು ಕೃಷ್ಣ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟು ಕೃಷ್ಣ ಅವರ ನಿವಾಸಕ್ಕೆ ನಿಯೋಗÀವನ್ನು ಕರೆದೊಯ್ದಿದ್ದರಲ್ಲದೆ ತಲಕಾವೇರಿ ಅಭಿವೃದ್ಧಿಯಾಗಬೇಕೆಂದು ಒತ್ತಾಯಿಸಿದ್ದರು. ಆ ಹಿನ್ನೆಲೆಯಲ್ಲಿ ಕಾವೇರಿ ಅಭಿವೃದ್ಧಿ ನಿಗಮದ ಮೂಲಕ ೧೭.೫೦ ಕೋಟಿ ರೂ. ವೆಚ್ಚದಲ್ಲಿ ಈಗಿನ ರೀತಿಯಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ಅಭಿವೃದ್ಧಿ ಹೊಂದಿದ್ದವು. ಈ ಕೃತಜ್ಞತೆಗಾಗಿ ಇಂದು ಏಕೀಕರಣ ರಂಗದಿAದ ಆಭರಣವನ್ನು ಮಾಡಿಸಿ ಭಾಗಮಂಡಲದಲ್ಲಿ ಕೆ.ಪಿ. ಚಂದ್ರಕಲಾ ಅವರ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿ ಮುಖ್ಯಮಂತ್ರಿಗಳಿAದ ದೇವಾಲಯಕ್ಕೆ ಸಮರ್ಪಿಸಲಾಯಿತು.

ಈ ಸಂದರ್ಭ ಕೊಡಗು ಏಕೀಕರಣ ರಂಗದ ಪ್ರಮುಖರಾದ ತಮ್ಮು ಪೂವಯ್ಯ, ಪಾಂಡಿರ ಮುತ್ತಣ್ಣ, ಪ್ರಮೋದ್ ಸೋಮಯ್ಯ, ಸಂಜು, ಅಮಿತ್ ಹಾಜರಿದ್ದರು.