ಸಿದ್ದಾಪುರ, ಆ. ೧೬: ಒಂಟಿಸಲಗವೊAದು ಮನೆಯ ಅಂಗಳಕ್ಕೆ ಲಗ್ಗೆಇಟ್ಟು ದಾಂಧಲೆ ನಡೆಸಿ ಕೃಷಿ ಫಸಲು ನಾಶಗೊಳಿಸಿ ಆತಂಕ ಸೃಷ್ಟಿಸಿದ ಘಟನೆ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ಕರಡಿಗೋಡು ಗ್ರಾಮದ ನಿವಾಸಿ ಕಂಬೀರAಡ ನಂದ ಗಣಪತಿ ಅವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಒಂಟಿಸಲಗ ಮನೆಯ ಅಂಗಳಕ್ಕೆ ಲಗ್ಗೆಇಟ್ಟು ಮನೆಯ ಗೋಡೆಯ ಬಳಿ ರಾತ್ರಿ ಘೀಳಿಡುತ್ತ ಸಂಚರಿಸಿದ ದೃಶ್ಯಗಳು ಅವರ ಮನೆಯಲ್ಲಿ ಅಳವಡಿಸಿದ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಡಾನೆಗಳು ಹಿಂಡು ಹಿಂಡಾಗಿ ಕಾಫಿ ತೋಟದೊಳಗೆ ಬೀಡುಬಿಟ್ಟು ದಾಂಧಲೆ ನಡೆಸಿ ಫಸಲಿರುವ ಕಾಫಿ ಗಿಡಗಳನ್ನು ಮತ್ತು ಅಡಿಕೆ ಮರಗಳನ್ನು ಧ್ವಂಸಗೊಳಿಸುತ್ತಿದೆ ಎಂದು ಅವರು ತಿಳಿಸಿದರು. ನಿರಂತರ ಕಾಡಾನೆಗಳ ಹಾಗೂ ಕಾಡುಕೋಣಗಳ ಹಾವಳಿಯಿಂದಾಗಿ ನಿರಂತರ ಸಮಸ್ಯೆ ಎದುರಾಗಿದೆ ಎಂದು ನಂದಾ ಗಣಪತಿ ಅಳಲು ತೋಡಿಕೊಂಡರು.