ಸುAಟಿಕೊಪ್ಪ, ಆ. ೧೬: ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಸುಂಟಿಕೊಪ್ಪದ ವಾರದ ಸಂತೆ ರದ್ದುಗೊಳಿಸಲಾಗುವುದು ಎಂಬ ಆದೇಶ ಹೊರಡಿಸಲಾಗಿದ್ದರೂ, ಬದಲಾದ ಪರಿಸ್ಥಿತಿಯಲ್ಲಿ ಭಾನುವಾರದ ವಾರದ ಸಂತೆ ಎಂದಿನAತೆ ನಡೆಯಿತು. ಆದರೆ ಭದ್ರತಾ ವ್ಯವಸ್ಥೆ ಹಾಗೂ ವಾಹನ ಸಂಚಾರದ ನಿರ್ಬಂಧದಿAದಾಗಿ ವ್ಯಾಪಾರ ವಹಿವಾಟಿನಲ್ಲಿ ಕೊಂಚ ಹಿನ್ನಡೆ ಕಂಡುಬAತು.

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಪಟ್ಟಣದ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿತ್ತು. ಬ್ಯಾರಿಕೇಡ್ ಅಳವಡಿಸಿ, ಪಟ್ಟಣದ ವಿವಿಧೆಡೆ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಸಂತೆ ರದ್ದಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆತಂಕಗೊAಡಿದ್ದ ವ್ಯಾಪಾರಸ್ಥರು ಹಾಗೂ ಗ್ರಾಹಕರಲ್ಲಿ ಸಂತೆ ಎಂದಿನAತೆ ನಡೆದ ಹಿನ್ನೆಲೆಯಲ್ಲಿ ನಿರಾಳತೆ ಮೂಡಿತು.