ಮಡಿಕೇರಿ, ಆ. ೧೬: ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರನ್ನು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು.
ಭಾಗಮಂಡಲದಿAದ ರಸ್ತೆ ಮಾರ್ಗವಾಗಿ ಮಡಿಕೇರಿಯ ಜ. ತಿಮ್ಮಯ್ಯ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಶಿಳ್ಳೆ, ಕೇಕೆ ಹಾಕಿ ಸಂಭ್ರಮ ತೋರ್ಪಡಿಸಿದರು. ಬ್ಯಾಂಡ್, ಚಂಡೆ ವಾದ್ಯಗಳು ಮೇಳೈಸಿದವು. ಡಿ.ಕೆ. ಶಿವಕುಮಾರ್ ಕಾರಿನಿಂದ ಹೊರಬಂದ ವೇಳೆ ಅವರ ಮೇಲೆ ಜೆಸಿಬಿ ಮೂಲಕ ಪುಷ್ಪವೃಷ್ಠಿ ಸುರಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಮಡಿಕೇರಿ ಶಾಸಕ ಮಂತರ್ ಗೌಡ ಅವರು ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡರು. ಅನಂತರ ಖಾಸಗಿ ರೆಸಾರ್ಟ್ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಂತರ್ ಗೌಡ ಅವರು ಕಾಫಿಯಲ್ಲಿ ತಯಾರಿಸಿದ ಹಾರ ಹಾಗೂ ಉಡುಗೊರೆ ನೀಡಿ ಸ್ವಾಗತಿಸಿಕೊಂಡರು. ಈ ವೇಳೆ ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಕೂಡ ಹಾಜರಿದ್ದರು.
ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಿಮ್ಮೆಲ್ಲರ ಪ್ರತಿನಿಧಿಯಾಗಿ ಮತ್ತು ನಿಮ್ಮ ಶಾಸಕರೊಂದಿಗೆ ಸೇರಿ ಈ ಜಿಲ್ಲೆಗೆ ಪ್ರತ್ಯೇಕವಾದಂತ ಯೋಜನೆಯನ್ನು ಮುಂದಿನ ದಿನದಲ್ಲಿ ನೀಡಲು ಬದ್ಧನಿದ್ದೇನೆ. ೨೦೨೮ ರಲ್ಲಿ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುತ್ತದೆ. ನಿಮ್ಮೆಲ್ಲರ ಸಹಕಾರಬೇಕೆಂದು ಹೇಳಿದರು.
ಕೊಡಗಿನ ಈರ್ವರು ಶಾಸಕರು ಪಕ್ಷಕ್ಕೆ ಹಾಗೂ ರಾಜ್ಯ ಸರಕಾರಕ್ಕೆ ಶಕ್ತಿ ನೀಡಿದ್ದಾರೆ. ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್ ಪೊನ್ನಣ್ಣ ಅವರುಗಳಿಬ್ಬರೂ ಮಡಿಕೇರಿ ಹಾಗೂ ಭಾಗಮಂಡಲದಲ್ಲಿ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿರುವುದು ಶ್ಲಾಘನೀಯ. ಕೊಡಗಿನ ಅಭಿವೃದ್ಧಿಗೆ ಸಂಬAಧಪಟ್ಟAತೆ ಅನೇಕ ವಿಚಾರಗಳ ಬಗ್ಗೆ ಇಬ್ಬರು ಚರ್ಚೆ ನಡೆಸಿದ್ದಾರೆ. ಕೊಡಗಿನ ಬೆಳವಣಿಗೆಗೆ ಪ್ರತ್ಯೇಕ ಆಲೋಚನೆಗಳು ಅಗತ್ಯವಿದ್ದು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.
ಯುವಕರು ಕ್ರೀಡೆ, ಸಂಸ್ಕೃತಿ, ಸಾಹಿತ್ಯ ವಿಚಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯುವಶಕ್ತಿ ಹೆಚ್ಚಿಸಲು ಭಾರತ್ ಜೋಡೋ ಕಾರ್ಯಕ್ರಮ ರೂಪಿಸಲಾಗಿದೆ. ಇದರಡಿಯಲ್ಲಿ ಪ್ರತಿ ಪಂಚಾಯಿತಿಗೆ ರೂ.೧೦ ಲಕ್ಷ ಅನುದಾನ ದೊರಕಲಿದೆ. ಯುವಶಕ್ತಿ ಇದರ ಸದುಪಯೋಗ ಪಡೆದುಕೊಂಡು ರಾಷ್ಟçಶಕ್ತಿಯನ್ನೂ ಹೆಚ್ಚಿಸುವಂತಾಗಬೇಕೆAದರು. ಜನರ ಆಶೀರ್ವಾದ, ಕಾರ್ಯಕರ್ತರ ಶ್ರಮದಿಂದ ಇಂದು ತಾವು ಮುಖ್ಯಮಂತ್ರಿಯಾಗಿದ್ದು, ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಉತ್ತಮ ಮಳೆಗಾಗಿ ಎಲ್ಲರೂ ಪ್ರಾರ್ಥಿಸುವಂತೆಯೂ ಈ ಸಂದರ್ಭ ಅವರು ಮನವಿ ಮಾಡಿದರು.
೩ ಗಂಟೆಗೂ ಅಧಿಕ ಸಮಯ ಕಾದ ಜನರು
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಿ.ಎಂ ಡಿ.ಕೆ ಶಿವಕುಮಾರ್ ಅವರಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಮಧ್ಯಾಹ್ನ ಸುಮಾರು ೩ ಗಂಟೆಗೆ ಆಗಮಿಸಿದರು. ೧೨ ಗಂಟೆಯಿAದಲೇ ವೃತ್ತದಲ್ಲಿ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಸಿ.ಎಂ ಆಗಮನಕ್ಕೆ ಕಾಯುತ್ತಿದ್ದರು. ೩ ಗಂಟೆಗಳ ಕಾಲ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿ ವಾಹನಗಳ ಸುಗಮ ಸಂಚಾರಕ್ಕಾಗಿ ತೊಡಕಾಗದಂತೆ ನೋಡಿಕೊಂಡರು. ಮಾಲ್ದಾರೆಯ ಶ್ರೀ ಮುತ್ತಪ್ಪ ಚಂಡೆ ಮೇಳ ಹಾಗೂ ಕುಶಾಲನಗರದ ಕೆ.ಎನ್.ಬಿ ಬೀಟ್ಸ್ ತಂಡದ ಸದಸ್ಯರು ಕೂಡ ಸಿ.ಎಂ ಆಗಮನಕ್ಕೆ ಸುಮಾರು ೩ ಗಂಟೆ ಕಾದು ಕುಳಿತರು.