ಶನಿವಾರಸಂತೆ, ಆ. ೧೬: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ವಾಹನವೊಂದು ಒಂದು ತಿಂಗಳಿನಿAದ ಗುಡುಗಳಲೆ ವೃತ್ತದಲ್ಲಿ ತ್ಯಾಜ್ಯ ತುಂಬಿಸಿಕೊAಡು ನಿಂತಿದೆ. ೧೨ ದಿನಗಳಿಂದ ಗ್ರಾಮದ ಮನೆಗಳ ಕಸ ಸಂಗ್ರಹಕ್ಕೆ ಯಾರೂ ಬರುತ್ತಿಲ್ಲ. ವಾಹನದಲ್ಲಿ ಇರುವ ಕಸ ಗಬ್ಬೆದ್ದು ನಾರುತ್ತಿದೆ. ಸುತ್ತಮುತ್ತಲಿನ ನಿವಾಸಿಗಳು ಕಸವನ್ನು ತಂದು ನಿಂತಿರುವ ವಾಹನಕ್ಕೆ ಎಸೆಯುತ್ತಿದ್ದಾರೆ. ಕಸ ತುಂಬಿ ಕೆಳಕ್ಕೆ ಬಿದ್ದು ಚೆಲ್ಲಾಡಿದ್ದು, ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಕೇಳುವವರೆ ಇಲ್ಲ ಎಂದು ಗ್ರಾಮದ ವರ್ತಕರಾದ ಧರ್ಮಣ್ಣ, ಗಣೇಶ್, ಮಂಜು, ಭರತ್ ಹುಲುಸೆ ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಡುಗಳಲೆ ಜಾತ್ರಾ ಮೈದಾನದ ಬೆಟ್ಟದ ತುದಿಯಲ್ಲಿ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕವಿದ್ದು ಮಳೆಗಾಲದಲ್ಲಿ ಸರ್ಕಾರಿ ದ್ವಿಚಕ್ರದ ಆಟೋ ಬೆಟ್ಟವೇರಲು ಸಾಧ್ಯವಾಗುವುದಿಲ್ಲ. ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಿಲ್ಲದ ಕಾರಣ ವಾರಕ್ಕೊಮ್ಮೆ ಹಣ ಕೊಟ್ಟು ಕಸ ಸಂಗ್ರಹಿಸಿ ತಂದು ಹಾಕಲು ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದು; ತಿಂಗಳಾದರೂ ಹಣ ಕೊಡದ ಕಾರಣ ತ್ಯಾಜ್ಯದ ವಾಹನ ಗುಡುಗಳಲೆ ವೃತ್ತದಲ್ಲಿ ನಿಂತಲ್ಲೇ ನಿಂತಿದೆ.

ಸುತ್ತಮುತ್ತಲಿನವರು ಬ್ಯಾರೆಲ್‌ಗಳಲ್ಲಿ ಕಸ ತಂದು ಹತ್ತಿರದ ಹೊಳೆಗೇ ಹಾಕುತ್ತಿದ್ದಾರೆ. ಕೊಳೆತ ತ್ಯಾಜ್ಯದ ದುರ್ವಾಸನೆ ಜತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಬಸ್ ತಂಗುದಾಣದಲ್ಲಿ ಪ್ರಯಾಣಿಕರು ದುರ್ವಾಸನೆಯೊಂದಿಗೆ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಗ್ರಾಮ ಪಂಚಾಯಿತಿಗೆ ಹಿಡಿಶಾಪ ಹಾಕುವಂತಾಗಿದೆ. ಪರಿಸರ ಮಲಿನಗೊಳ್ಳುತ್ತಿದ್ದರೂ ಪಿಡಿಒ ಆಗಲೀ ಇತರೆ ಅಧಿಕಾರಿಗಳಾಗಲಿ ಯಾರು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.