ಅನಿಲ್ ಹೆಚ್.ಟಿ.
ಮಡಿಕೇರಿ, ಆ. ೧೬: ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಭಾನುವಾರ ಆಯೋಜಿತ ವಿವಾಹ ಸಮಾರಂಭ, ಕೊಡಗಿನಲ್ಲಿ ಈವರೆಗೆ ಜರುಗಿದ ಪ್ರತಿಷ್ಠಿತ ವಿವಾಹ ಸಮಾರಂಭಗಳ ಪೈಕಿ ಒಂದಾಗಿ ದಾಖಲೆಯಾಯಿತು.
ಕರ್ನಾಟಕದಲ್ಲಿ ಹೆಸರಾಂತ ಉದ್ಯಮಿಯಾಗಿ ಹೆಸರು ಮಾಡಿರುವ ಬೆಂಗಳೂರು ಶಾಂತಿನಗರದ ಶಾಸಕರೂ ಆಗಿರುವ ಎನ್.ಎ. ಹ್ಯಾರೀಸ್ ಅವರ ಪುತ್ರ, ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರು ಮಡಿಕೇರಿಯ ಕಾಂಗ್ರೆಸ್ ಮುಖಂಡ ಎಸ್.ಐ.. ಮುನೀರ್ ಅಹಮ್ಮದ್ ಅವರ ಮೂರನೇ ಮಗಳು ಮಲಿಹಾ ಫಾತಿಮ ಅವರನ್ನು ವಿವಾಹವಾದರು.
ಮೇಕೇರಿ ಗ್ರಾಮದಲ್ಲಿರುವ ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್ನಲ್ಲಿ ಭಾನುವಾರ ಆಯೋಜಿತ ವಿವಾಹ ಸಮಾರಂಭಕ್ಕೆ ರಾಜ್ಯ ಮತ್ತು ಹೊರರಾಜ್ಯಗಳ ಗಣ್ಯರನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ೫೦೦- ೬೦೦ ಅತೀ ಗಣ್ಯರು ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಹಲವಾರು ವರ್ಷಗಳಿಂದ ಸ್ನೇಹಿತರಾಗಿರುವ ಹ್ಯಾರೀಸ್ ಮತ್ತು ನಲಪಾಡ್ ಆಹ್ವಾನದಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಅವರೊಂದಿಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನವದಂಪತಿಗೆ ಶುಭಹಾರೈಸಿದರು. ಶಿವಕುಮಾರ್ ಇರುವಾಗಲೇ ಕನ್ನಡದ ಖ್ಯಾತ ಚಿತ್ರನಟ ಸುದೀಪ್ ಕೂಡ ಪತ್ನಿ ಪ್ರಿಯಾ ಜತೆ ವಿವಾಹಕ್ಕೆ ಬಂದರು. ವೇದಿಕೆಯಲ್ಲಿಯೇ ಶಿವಕುಮಾರ್ - ಸುದೀಪ್ ಮತ್ತು ಹ್ಯಾರೀಸ್ ಆತ್ಮೀಯವಾಗಿ ಮಾತನಾಡಿದ್ದು ಗಮನ ಸೆಳೆಯಿತು. ಕಪ್ಪು ಶೆರ್ವಾನಿ ಧಿರಿಸಿನಲ್ಲಿ ಸುದೀಪ್ ಗಮನ ಸೆಳೆದರು. ಭೋಜನ ಸಂದರ್ಭ ಸುದೀಪ್ ಪತ್ನಿ ಪ್ರಿಯಾ, ಮುಖ್ಯಮಂತ್ರಿ ಪತ್ನಿ ಉಷಾ ಅವರಿಗೆ ಜತೆಯಾದರು.
ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರಸ್ವಾಮಿ, ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ರಾಜ್ಯ ಸರ್ಕಾರಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್, ಸೇರಿದಂತೆ ಕೊಡಗಿನ ಕಾಂಗ್ರೆಸ್ ಪ್ರಮುಖರು ಕೂಡ ನವದಂಪತಿಗೆ ಶುಭಹಾರೈಸಿದರು. ಬೆಂಗಳೂರು, ಕೇರಳ, ಮುಂಬೈ, ಚೆನ್ನೆöÊನಿಂದಲೂ ಗಣ್ಯಾತಿಗಣ್ಯರು, ರಾಜಕಾರಣಿಗಳು, ಅಂಬರೀಷ್ ಪುತ್ರ ಅಭಿಷೇಕ್ ಪತ್ನಿ ಅವಿವಾ ಬಿದ್ದಪ್ಪ, ಹೆಸರಾಂತ ಸ್ಟಾö್ಯಂಡ್ ಅಪ್ ಕಾಮಿಡಿಯನ್ ಸಮಯ್ ರೈನಾ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೂಡ ಆಗಮಿಸಿ ಹಾರೈಸಿದರು. ವಿವಾಹಕ್ಕೆ ಸಾಕ್ಷಿಯಾದರು. ಎಂಬೈಸಿ, ಬ್ರಿಗೇಡ್ ಗ್ರೂಪ್ ಸೇರಿದಂತೆ ದೇಶದ ಪ್ರಮುಖ ಉದ್ಯಮಿಗಳೂ ವಿವಾಹಕ್ಕೆ ಬಂದು ನವವಿವಾಹಿತರಿಗೆ ಶುಭಹಾರೈಸಿದರು. ನಲಪಾಡ್ ಅವರ ಯುವಮಿತ್ರರು ವಿವಾಹ ಸಮಾರಂಭದಲ್ಲಿ ಉತ್ಸಾಹದಿಂದ ಓಡಾಡಿ ಗಮನ ಸೆಳೆದರು.
ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ವಿವಾಹಕ್ಕೆಂದು ಮಡಿಕೇರಿಗೆ ಹೆಲಿಕಾಪ್ಟರ್‌ನಲ್ಲಿ ಪಯಣ ಬೆಳಸಿದ್ದರಾದರೂ ಪ್ರತಿಕೂಲ ಹವಾಮಾನದಿಂದ ಸತೀಶನ್ ಇದ್ದ ಹೆಲಿಕಾಪ್ಟರ್ ಕಣ್ಣೂರಿನಲ್ಲಿಯೇ ಲ್ಯಾಂಡ್ ಆಯಿತು. ರಸ್ತೆ ಮೂಲಕ ಪ್ರಯಾಣ ಬೆಳೆಸಲು ಸತೀಶÀನ್ ಸಿದ್ಧತೆ ಮಾಡಿಕೊಂಡರಾದರೂ ಮೇಕೇರಿಗೆ ಸಾಗಿ, ವಾಪಾಸ್ ಮರಳಿ ಬರಲು ಕೆಲಗಂಟೆಗಳೇ ಬೇಕಾಗಿದ್ದು ಕೊಚ್ಚಿಯಲ್ಲಿ ಸಂಜೆ ಪ್ರಮುಖ ಕಾರ್ಯಕ್ರಮದಲ್ಲಿ ಪಾಲ್ಲೊಳ್ಳಲೇಬೇಕಾಗಿದ್ದ ಹಿನ್ನಲೆಯಲ್ಲಿ ಕೊನೇ ಕ್ಷಣದಲ್ಲಿ ರಸ್ತೆ ಪ್ರಯಾಣ ರದ್ದುಗೊಳಿಸಿ ಈ ವಿಚಾರವನ್ನು ಹ್ಯಾರೀಸ್ ಅವರಿಗೆ ಮೊಬೈಲ್ ಮೂಲಕ ತಿಳಿಸಿದರು.
ಶನಿವಾರ ಸಂಜೆಯಿAದಲೇ ವಿವಾಹ ಸಂಬAಧಿತ ಕಾರ್ಯಕ್ರಮಗಳು ಆಯೋಜನೆಯಾಗಿದ್ದವು. ಕೆಲವೇ ಕೆಲವರಿಗೆ ಆಹ್ವಾನದ ಹಿನ್ನಲೆಯಲ್ಲಿ, ಎಲ್ಲಿಯೂ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಕಾರ್ಯಕ್ರಮಗಳು ಜರುಗಿದವು. ಶನಿವಾರ ಸಂಜೆ ಮಲಿಹಾ ಪಾತಿಮ ಅವರ ಮೆಹಂದಿ ಶಾಸ್ತ್ರದಲ್ಲಿ ವಧುವಿನ ಗೆಳತಿಯರು ಪಾಲ್ಗೊಂಡು ಸಂಗೀತ ಕಾರ್ಯಕ್ರಮದಲ್ಲಿಯೂ ಸಂಭ್ರಮಿಸಿದ್ದರು. ವಿವಾಹದ ಬಳಿಕ ಭಾನುವಾರ ಸಂಜೆ ಆಯೋಜಿತ ಕಾರ್ಯಕ್ರಮದಲ್ಲಿ ಕವ್ವಾಲಿ ಪ್ರಕಾರದ ಸೂಫಿ ಸಂಗೀತ ಆಹ್ವಾನಿತ ಗಣ್ಯರ ಮನಗೆದ್ದಿತ್ತು. ಉತ್ತಮ ಗಾಯಕರೂ ಆಗಿರುವ ವಧುವಿನ ತಂದೆ ಮುನೀರ್ ಅಹಮ್ಮದ್ ಕೂಡ ಹಾಡುಗಳನ್ನು ಹಾಡಿದ್ದು ವಿಶೇಷವಾಗಿತ್ತು. ವಿವಾಹದಂದು ಮಡಿಕೇರಿಯ ವಧು ಮಲಿಹಾ ಪಾತಿಮ ಆಕರ್ಷಕ ಎಂಬ್ರಾಯಿಡರಿಯೊAದಿಗಿನ ಲೆಹಂಗಾ ಧರಿಸಿ ಕಂಗೊಳಿಸಿದ್ದರೆ ವಧು ಬೆಂಗಳೂರಿನ ಮೊಹಮ್ಮದ್ ನಲಪಾಡ್ ಶೆರ್ವಾನಿ ಧರಿಸಿದ್ದರು.
ವಿವಾಹಕ್ಕೆ ನೂರಾರು ವಿಧದ ಸ್ವಾದಿಷ್ಯ ಮತ್ತು ವಿಶೇಷ ಭಕ್ಷಗಳನ್ನು ನುರಿತ ಬಾಣಸಿಗರು ಸಿದ್ದಗೊಳಿಸಿದ್ದರು. ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳು, , ಕೇರಳದ ಮಲಬಾರ್ ಖಾದ್ಯ ಶೈಲಿಯಲ್ಲದೇ, ಚೈನೀಸ್, ಕಾಂಟಿನೆAಟಲ್‌ನ ಹಲವಾರು ಖಾದ್ಯಗಳು ಕೂಡ ಗಣ್ಯರಿಗಾಗಿ ಸಿದ್ದಗೊಂಡಿದ್ದವು. ಒಂದು ರೀತಿಯಲ್ಲಿ ಅನೇಕ ದೇಶಗಳಿಗೆ ಸೇರಿದ ಆಹಾರಗಳ ಮೇಳವೇ ಈ ವಿವಾಹದಲ್ಲಿ ಕಂಡುಬAದಿತ್ತು. ಸನಾಸ್ ನಿಂದ ಮೊದಲ್ಗೊಂಡು ಚಿಕನ್, ಮಟನ್, ೮ ವೆರೈಟಿಗಳು, ದೋಸಾ, ಪರೋಟ, ಬತೂರ, ಜತೆಗೆ ೮೦ ಕ್ಕೂ ಅಧಿಕ ವಿಧದ ಸಿಹಿಖಾದ್ಯಗಳು ಅತಿಥಿಗಳ ಮನಗೆದ್ದವು.
ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್ನ ಹೆಲಿಪ್ಯಾಡ್‌ನಲ್ಲಿ ಈ ವಿವಾಹಕ್ಕೆಂದೇ ವಿಶೇಷ ಪೆಂಡಾಲ್ ಮತ್ತು ವಿವಾಹ ಭವನವನ್ನು ಕೇವಲ ೪ ದಿನಗಳಲ್ಲಿಯೇ ನಿರ್ಮಾಣ ಮಾಡಲಾಗಿತ್ತು. ಗಣ್ಯರನ್ನು ಬಗ್ಗಿ ವಾಹನ ವ್ಯವಸ್ಥೆ ಮೂಲಕ ವಿವಾಹ ಸಬಾಂಗಣಕ್ಕೆ ಕರೆದೊಯ್ಯಲಾಯಿತು.
ಸಾಮಾನ್ಯವಾಗಿ ಮುಂಬೈ, ಬೆಂಗಳೂರು, ಚೆನ್ನೈನಲ್ಲಿ ಆಯೋಜಿತವಾಗುವ ವಿಶೇಷಾತಿವಿಶೇಷ ವಿವಾಹವೊಂದಕ್ಕೆ ಮೇಕೇರಿಯಲ್ಲಿರುವ ಮಾಜಿ ಸಚಿವ ದಿ.ಟಿ.ಜಾನ್ ಅವರು ರೂಪಿಸಿದ್ದ ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್ ಸಾಕ್ಷಿಯಾಯಿತು. ಗಣ್ಯರ ಆಗಮನದ ಹಿನ್ನಲೆಯಲ್ಲಿ ಮಡಿಕೇರಿ - ಮೇಕೇರಿಯ ರಸ್ತೆಯಲ್ಲಿದ್ದ ಗುಂಡಿಗಳನ್ನೂ ಮುಚ್ಚಿ, ರಸ್ತೆಯ ಸುಸ್ಥಿತಿ ಕಾಪಾಡಿದ್ದೂ ಕೂಡ ಗಮನಾರ್ಹ!
ಸಂಜೆ ೫ ಗಂಟೆಗೆ ಕಾರ್ಯಕ್ರಮ ಮುಗಿಸಿ ಮಡಿಕೇರಿಗೆ ರಸ್ತೆ ಮಾರ್ಗದ ಮೂಲಕ ಬಂದು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ನಿರ್ಗಮಿಸಿದರು.