ಮಡಿಕೇರಿ, ಆ. ೧೬: ಮಡಿಕೇರಿ ದಸರಾ ದಶಮಂಟಪ ಸಮಿತಿಯ ಜವಾಬ್ದಾರಿಯನ್ನು ಈ ಬಾರಿ ಕರವಲೆ ಭಗವತಿ ದೇವಾಲಯ ಸಮಿತಿಗೆ ಹಸ್ತಾಂತರಿಸಲಾಗಿದ್ದು, ಅಧ್ಯಕ್ಷರಾಗಿ ಪಾಂಡಿರ ಪೂಣಚ್ಚ ಆಯ್ಕೆಗೊಂಡಿದ್ದಾರೆ.
ಕಳೆದ ವರ್ಷ ದಶಮಂಟಪ ಸಮಿತಿಯನ್ನು ನಿರ್ವಹಿಸಿದ್ದ ಶ್ರೀ ಕೋಟೆ ಗಣಪತಿ ದೇವಾಲಯ ಸಮಿತಿ ವತಿಯಿಂದ ಅಧ್ಯಕ್ಷ ಹರೀಶ್ ಅವರು ಅಧಿಕಾರವನ್ನು ಹಸ್ತಾಂತರಿಸಿದರು. ಕೋಟೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದು ಅಧಿಕಾರವನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ನಗರಸಭೆ ಉಪಾಧ್ಯಕ್ಷ ಮಹೇಶ್ ಶೈನಿ, ಸದಸ್ಯೆ ಸವಿತಾ ರಾಕೇಶ್, ನಗರ ದಸರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಉಮೇಶ್ ಸುಬ್ರಮಣಿ, ಕೋಟೆ ಗಣಪತಿ ಸಮಿತಿ ಅಧ್ಯಕ್ಷ ಶರಣ್ ಪೂಣಚ್ಚ, ಪ್ರಮುಖರಾದ ಸತೀಶ್ ಶೇಟ್, ಚಂದ್ರಶೇಖರ್, ಪುನೀತ್, ರಾಜೇಶ್ ಬಿ.ಎಂ, ಸವಿತಾ ಅರುಣ್, ಸಂತೋಷ್ ಅಣ್ವೇಕರ್, ಗುರುಕಿರಣ್ ಬಿ.ಪಿ, ಮನೋಹರ್, ಸುಮೇಶ್, ಎಸ್.ಎ. ವಿನಾಯಕ್, ಸಾತ್ವಿಕ್, ಲೋಚನ್ ಅಣ್ವೇಕರ್, ಭಗವತಿ ದೇವಾಲಯದ ದಶಮಂಟಪ ಸಮಿತಿಯ ಪದಾಧಿಕಾರಿಗಳಾದ ಡೀನ್ ಬೋಪಣ್ಣ, ಸಚಿನ್, ಜಗದೀಶ್ ರೈ, ಆಕಾಶ್ ಭಂಡಾರಿ, ರವಿನ್ ಮಾಚಯ್ಯ, ಅಚ್ಚಯ್ಯ, ದರ್ಶನ್, ಕುಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.