ಆಷಾಡ ಕಳೆದಂತೆ ಶ್ರಾವಣಮಾಸದಲ್ಲಿ ಬರುವ ಹಬ್ಬ ನಾಗರ ಪಂಚಮಿ. ನಾಗಾರಾಧನೆಯ ಸುತ್ತ ಹೆಣೆಯಲ್ಪಟ್ಟಿರುವ ಕಥೆಗಳು ಹಲವಾರು. ಶುಭ - ಅಶುಭಗಳನ್ನು ನಿರ್ಧರಿಸಲು ನಾಗನನ್ನು ಬಳಸುವ ಕ್ರಮ ರೂಢಿಯಲ್ಲಿತ್ತು. ನಾಗನ ಅನುಗ್ರಹದಿಂದ ಸಂತಾನ ಪ್ರಾಪ್ತಿ ಎಂಬ ನಂಬಿಕೆ ಹಲವರಲ್ಲಿದೆ.

ನಾಗಾರಾಧನೆಯ ಪ್ರಕೃತಿಯ ಒಂದು ಭಾಗ. ಅನಾದಿ ಕಾಲದಿಂದಲೂ ನಾಗಪೂಜೆ ಮಾಡುವರು ಋಗ್ವೇದದ ಮಹತ್ವಪೂರ್ಣ ದೇವತೆಗಳಲ್ಲಿ ಸರ್ಪಕೂಡ ಒಂದೆನ್ನಲಾಗಿದೆ. ನಾಗನ ಕಲ್ಲುಗಳನ್ನು ಹೆಚ್ಚಾಗಿ ಅಶ್ವತ್ಥ ವೃಕ್ಷದ ಕೆಳಗೆ ನೆಟ್ಟಿರುತ್ತಾರೆ. ಭೂಮಿ ನಿಂತಿರುವುದೇ ಸರ್ಪರಾಜನಾದ ಆದಿಶೇಷನ ಹೆಜ್ಜೆಯ ಮೇಲೆ ಎಂಬುದು ಪೌರಾಣಿಕ ಅಭಿಮತ. ಸರ್ಪ ಶಿವನ ಕೊರಳಿನ ಆಭರಣ. ಗಣೇಶನ ಉದರೆಬಂಧ, ಸುಬ್ರಹ್ಮಣ್ಯನ ಸ್ವರೂಪ, ಯೋಗ ಸಾಧನೆಯಲ್ಲಿ ಕುಂಡಲಿನೀಶಕ್ತಿ, ಸುಬ್ರಹ್ಮಣ್ಯ, ನಾಗಗಳಿಂದ ಆರಾಧಿತ ದೈವ, ಲಕ್ಷö್ಮಣ, ಬಲರಾಮ, ಆದಿಶೇಷನ ಅವತಾರವೆಂದು ಹೇಳುವರು.

ನಾಗಾರಾಧನೆ ಮಾಡುವ ಶೇಷ್ಠದಿನ ನಾಗರಪಂಚಮಿ. ಪಂಚಮಿಯೆAದು ಇದನ್ನು ಆಚರಿಸುವರು. ಷಷ್ಠಿಯ ದಿನವೂ ಸ್ನಾನಮಾಡಿ ಮಡಿಉಟ್ಟು ಕಲ್ಲುನಾಗನಿಗೆ ಅಥವಾ ಮಣ್ಣಿನಲ್ಲಿ ಮಾಡಿದ ನಾಗನಿಗೆ, ಹುತ್ತಕ್ಕೆ ಪೂಜೆ ಸಲ್ಲಿಸಿ ತೆನಿ ಎರೆಯುವರು ತಂಬಿಟ್ಟುಉAಡೆಯ ನೈವೇದ್ಯ ಮಾಡಿ ಎಲ್ಲರೂ ಹಾಲೆರೆದು ಬೇಡಿಕೊಳ್ಳುವರು.

ನಾಗನನ್ನು ರಂಗೋಲಿಯಿAದ ಬಿಡಿಸಿ, ಹುತ್ತದ ಮಣ್ಣು ಗೋದಿ ಹಿಟ್ಟು ಕಲಿಸಿ ಸರ್ಪದಂತೆ ಮಾಡಿ ನಾಗನ ಮೇಲಿಟ್ಟು ಹಾಲು ತುಪ್ಪ ಅರ್ಪಿಸುವುದು, ನಾಗರ ಪಂಚಮಿ ಕುರಿತು ಹಲವಾರು ಜನಪದ ಕಥೆಗಳಿವೆ. ಆ ಕಥೆಗಳಲ್ಲಿ ನಾಗರಪಂಚಮಿ ಹಬ್ಬದ ಮಹತ್ವ ಅಡಗಿದೆ. ಈ ಹಬ್ಬಕ್ಕೆ ಹೆಣ್ಣು ಮಕ್ಕಳು ತವರಿಗೆ ಬರುವರು ಎಲ್ಲ್ಲಾ ಜೊತೆಗೂಡಿ ಹಬ್ಬದೂಟ ಸವಿದು ಮಾವಿನ ತೋಪಲ್ಲಿ ಉಯ್ಯಾಲೆ ಆಡಿ ಸಂತೋಷ ಪಡುವರು. ಜನಪದ ಹಾಡನ್ನು ಹಾಡಿ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳುವರು.

ನಾಗನ ಕುರಿತು ಜನಪದ ಹಾಡಿನ ಕಥೆಯೊಂದಿದೆ. ತಂಗಿಯನ್ನು ನಾಗರ ಪಂಚಮಿ ಹಬ್ಬಕ್ಕೆ ತವರಿಂದ ಕರೆತರಲು ಅಣ್ಣ ಬರುವನು. ಅಣ್ಣ ಬಿಡವ ತಂಗಿ ಗಂಡನ ಮನೆಯೆ ಶ್ರೀಮಂತ ಸೊಸೆ. ತಂಗಿಯನ್ನು ಅಣ್ಣ ಕರೆದೊಯ್ಯುತ್ತಿರುವಾಗ ತಂಗಿ ಹಾಕಿದ್ದ ಆಭರಣಾ ನೋಡಿ ಅವನಿಗೆ ದುರಾಸೆ ಉಂಟಾಯಿತು. ಅವನು ತಂಗಿ ಅದನ್ನೆ ಬಿಚ್ಚಿಕೊಡು ಎಂದು ರೇಗಿದ. ಆಕೆ ಕೊಡಲು ನಿರಾಕರಿಸಿದಳು. ಆಗ ಅವನಿಗೆ ಅವಳನ್ನು ಕೊಂದು ಒಡವೆ ಪಡೆವೆನೆಂದು ಮನದಲ್ಲಿ ಭಾವಿಸಿದ. ಅಲ್ಲೆ ಇದ್ದ ದೊಡ್ಡ ಕಲ್ಲಿನೆತ್ತಿ ಆಕೆಯ ತಲೆಗೆ ಹೊಡೆಯಲು ಮುಂದಾದ. ಆಗ ಕಲ್ಲಿನಡಿಯಲ್ಲಿದ್ದ ಸರ್ಪ ರೋಷಗೊಂಡು ಅವನನ್ನು ಕಚ್ಚಿ ಕೊಂದಿತು. ಆಗ ತಂಗಿ ನಾಗದೇವನನ್ನು ಭಕ್ತಿಯಿಂದ ಪ್ರಾರ್ಥಿಸಿ ಅಣ್ಣನನ್ನು ಬದುಕಿಸಿದಳು. ಅಣ್ಣನಿಗೆ ತನ್ನ ತಪ್ಪಿನರಿವಾಗಿ ಕ್ಷಮೆಯಾಚಿಸಿದ. ಅಂದಿನಿAದ ಹೆಣ್ಣುಮಕ್ಕಳು ನಾಗರ ಪಂಚಮಿ ಹಬ್ಬಕ್ಕೆ ತವರಿಗೆ ಬರುವುದು ವಾಡಿಕೆ. ಈ ಕಥೆಯನ್ನು ಜಾನಪದ ಹಾಡಿನ ರೂಪದಲ್ಲಿ ಹಿಂದೆ ದಾಸಯ್ಯ ಮನೆ, ಮನೆಗೆ ಬಂದು ಹಾಡಿ ಭಿಕ್ಷಾಟನೆ ಮಾಡುತ್ತಿದ್ದರು. ಹಾಗೆ ಮತ್ತೊಂದು ಕಥೆಯಲ್ಲಿ ರೈತ ಗದ್ದೆ ಉಳುತ್ತಿದ್ದಾಗ ಅವನ ನೆಗಿಲಿಗೆ ಹಾವಿನ ಮರಿ ಸಿಕ್ಕಿ ಸತ್ತಿತು. ಅದರ ತಾಯಿ ಸೇಡು ತೀರಿಸಲು ಹವಣಿಸಿತು. ಆ ರೈತನನ್ನು ಅವನ ಮನೆಯವರನ್ನು ಅಂದೇ ಕೊಂದಿತು. ರೈತನ ಮಗಳೊಬ್ಬಳು ಬೇರೆ ಊರಿನಲ್ಲಿ ಮದುವೆಯಾಗಿದ್ದಳು. ಅವಳನ್ನು ಕೊಲ್ಲಲು ಸರ್ಪ ಹೊರಟಿತು.

ಆ ಹೊತ್ತಿಗೆ ರೈತನ ಮಗಳು ಮಣ್ಣಲ್ಲಿ ನಾಗನ ಪ್ರತಿಮೆ ಮಾಡಿ ತನಿ ಎರೆದು ಪೂಜಿಸುತ್ತಿದ್ದಳು. ಅದನ್ನು ನೋಡಿದ ಹಾವಿಗೆ ಸಿಟ್ಟು ಮಾಯವಾಗಿ ನಿನ್ನನ್ನು ಕೊಲ್ಲಲು ಬಂದೆ. ಆದರೆ, ನೀನು ಪೂಜಿಸಿದ್ದು, ನೋಡಿ ನನ್ನ ಸಿಟ್ಟು ಕರಗಿತು. ನಿನಗೇನು ವರಬೇಕು ಕೇಳು ಎಂದಿತು. ಆಗ ಆಕೆ ನೀನು ಕೊಂದಿರುವ ನನ್ನ ತವರುಮನೆಯವರನ್ನು ಬದುಕಿಸು ಎಂದಳು. ಅದು ವಿಷ ಪರಿಹಾರ ಮಾಡಿತು. ಅಂದು ಶುದ್ಧ ಶ್ರಾವಣ ಪಂಚಮಿಯಾಗಿತ್ತು. ಶ್ರಾವಣದಲ್ಲಿ ಹೆಣ್ಣುಮಕ್ಕಳು ತವರಿಗೆ ಹೋಗುವುದಕ್ಕೂ ನಾಗನನ್ನು ಪೂಜಿಸಿ ಹಬ್ಬ ಮಾಡುವುದಕ್ಕೂ ಈ ಕಥೆಯೇ ಮೂಲ ಎನ್ನುವರು. ಇದು ಉತ್ತಮ ಸಂಸ್ಕೃತಿಯನ್ನು ಕಲ್ಪಿಸುವ ಹಬ್ಬದ ಸಂಕೇತವಾಗಿದೆ.

-ಚೊಟ್ಟೆಯAಡಮಾಡ ಲಲಿತ ಕಾರ್ಯಪ್ಪ,

ಟಿ. ಶೆಟ್ಟಿಗೇರಿ. ಮೊ. ೭೭೬೦೬೮೫೬೭೧